ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಬಸ್ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ಆಧುನಿಕ ಮತ್ತು ಅಗತ್ಯ ಸುರಕ್ಷತಾ ಸೌಲಭ್ಯಗಳನ್ನು ಒದಗಿಸಿದೆ.
KSRTC ಬಸ್ಗಳಲ್ಲಿ ತುರ್ತು ನಿರ್ಗಮನ ಬಾಗಿಲು, ಅಗ್ನಿ ನಂದಿಸುವ ವ್ಯವಸ್ಥೆ, ಹಾಗೂ ಪ್ರತಿಷ್ಠಿತ (ವೋಲ್ವೋ, ರಾಜಹಂಸ, ಅಂಬಾರಿ ಮೊದಲಾದ) ಬಸ್ಗಳಲ್ಲಿ ತುರ್ತು ಸಂದರ್ಭ ಬಳಕೆಗೆ ಹ್ಯಾಮರ್ ವ್ಯವಸ್ಥೆ ಅಳವಡಿಸಲಾಗಿದೆ.
ಜೊತೆಗೆ, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ನೆರವು ಒದಗಿಸಲು ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಎಲ್ಲಾ ಬಸ್ಗಳಲ್ಲಿ ಇರಿಸಲಾಗಿದೆ.
ಪ್ರಯಾಣಿಕರ ಭದ್ರತೆ ಮತ್ತು ಅಪರಾಧ ತಡೆಗಾಗಿ ಪ್ಯಾನಿಕ್ ಬಟನ್ ವ್ಯವಸ್ಥೆ, ಡ್ಯಾಶ್ ಕ್ಯಾಮರಾ, ಹಾಗೂ ಬಸ್ ಒಳಭಾಗದಲ್ಲಿ ಕ್ಯಾಮರಾ ವ್ಯವಸ್ಥೆ ಅಳವಡಿಸಲಾಗಿದ್ದು, ಇದರಿಂದ ಚಾಲನೆ ಮೇಲ್ವಿಚಾರಣೆ ಮತ್ತು ಪ್ರಯಾಣಿಕರ ಸುರಕ್ಷತೆ ಇನ್ನಷ್ಟು ಬಲಪಡಿಸಲಾಗಿದೆ.
ನಿಯಮಿತ ತಾಂತ್ರಿಕ ತಪಾಸಣೆ, ಚಾಲಕರು ಮತ್ತು ನಿರ್ವಾಹಕರಿಗೆ ನಿರಂತರ ಸುರಕ್ಷತಾ ತರಬೇತಿ ನೀಡುವ ಮೂಲಕ, ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ನಂಬಿಗಸ್ತ ಸಾರಿಗೆ ಸೇವೆ ಒದಗಿಸಲು KSRTC ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





Post Comment