ಶಾಸಕ ಎನ್. ಎ. ಹ್ಯಾರಿಸ್ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ
ಬೆಂಗಳೂರು: ಆಸ್ಟಿನ್ ಟೌನ್ ಬಿಡಿಎ ಗ್ರೌಂಡ್ನಲ್ಲಿ ಇಂದು 7’S ಫುಟ್ಬಾಲ್ ಪಂದ್ಯಾವಳಿಗೆ ಭವ್ಯ ಚಾಲನೆ ದೊರಕಿದೆ. ಎನ್.ಎ. ಹ್ಯಾರಿಸ್ ಫೌಂಡೇಷನ್ ವತಿಯಿಂದ ಮಾನವೀಯತೆಯ ಹಬ್ಬದ ಅಂಗವಾಗಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ.

ಪಂದ್ಯಾವಳಿಗೆ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ ಉಪಾಧ್ಯಕ್ಷ, ಶಾಸಕ ಎನ್. ಎ. ಹ್ಯಾರಿಸ್ ಅವರು ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆ ಯುವಕರಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಬಾಳ್ವೆಯ ಮನೋಭಾವವನ್ನು ಬೆಳೆಸುವ ಶಕ್ತಿಯುತ ಮಾಧ್ಯಮವಾಗಿದೆ ಎಂದು ಹೇಳಿದರು.

ಮಾನವೀಯತೆಯ ಹಬ್ಬದ ಭಾಗವಾಗಿ ಇಂದಿನಿಂದ ಜನವರಿ 11ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಬೃಹತ್ ಉದ್ಯೋಗ ಮೇಳ, ಆರೋಗ್ಯ ಶಿಬಿರ, ಹ್ಯೂಮಾನಿಟಿ ಎಕ್ಸಿಬಿಷನ್ ಸೇರಿದಂತೆ ಸಮಾಜಮುಖಿ ಚಟುವಟಿಕೆಗಳು ಜರುಗಲಿವೆ.






Post Comment