×

ಸಿಎ ಅಂತಿಮ ಪರೀಕ್ಷೆಯಲ್ಲಿ ಕುಕ್ಕಾಜೆಯ ಶಿಹಾಬುದ್ದೀನ್ ಉತ್ತೀರ್ಣ

ಮಂಗಳೂರು: Institute of Chartered Accountants of India 2026ರ ಜನವರಿಯಲ್ಲಿ ನಡೆಸಿದ ಸಿಎ (Chartered Accountant) ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಯುವ ಪ್ರತಿಭೆ ಮುಹಮ್ಮದ್ ಶಿಹಾಬುದ್ದೀನ್ ಅವರು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

ಬಂಟ್ವಾಳ ತಾಲೂಕಿನ ಕುಕ್ಕಾಜೆ ನಿವಾಸಿಯಾದ ಅಬ್ದುಲ್ ಮಜೀದ್ ಅವರ ಪುತ್ರ ಮುಹಮ್ಮದ್ ಶಿಹಾಬುದ್ದೀನ್ ಅವರು ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಸಿಎ ಅಂತಿಮ ಪರೀಕ್ಷೆಯನ್ನು ಪಾಸಾಗಿ ತಮ್ಮ ಕುಟುಂಬ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ದೇಶದ ಅತ್ಯಂತ ಸವಾಲಿನ ವೃತ್ತಿಪರ ಪರೀಕ್ಷೆಗಳಲ್ಲಿ ಒಂದಾದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಅವರ ಶ್ರದ್ಧೆ ಮತ್ತು ಸಮರ್ಪಣೆಯ ಪ್ರತಿಫಲವಾಗಿದೆ.

ಶಿಹಾಬುದ್ದೀನ್ ಅವರ ಸಾಧನೆಗೆ ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಲೆಕ್ಕಪತ್ರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಇನ್ನಷ್ಟು ಯಶಸ್ಸುಗಳನ್ನೇರಲಿ ಎಂದು ಹಾರೈಸಲಾಗಿದೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed