ಸಚಿವ ರಾಮಲಿಂಗಾ ರೆಡ್ಡಿ ಅವರ- 7 ವರ್ಷಗಳ ಸೇವಾ ಮೈಲಿಗಲ್ಲು
-ವಿಶೇಷ ವರದಿ: ಹಂಝ ಕಿನ್ಯಾ
ಬೆಂಗಳೂರು: ದೂರದೃಷ್ಟಿ, ದಕ್ಷ ಆಡಳಿತ ಹಾಗೂ ಜನಪರ ನಿಲುವಿನ ಮೂಲಕ ರಾಜ್ಯ ಸಾರಿಗೆ ಇಲಾಖೆಗೆ ಹೊಸ ಚೈತನ್ಯ ತುಂಬಿದ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಇಲಾಖೆಯಲ್ಲಿ 7 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಸಚಿವರ ಅವಧಿಯಲ್ಲಿ ಸಾರಿಗೆ ವ್ಯವಸ್ಥೆಯ ಆಧುನೀಕರಣ, ಪ್ರಯಾಣಿಕರ ಸುರಕ್ಷತೆ, ಸೇವೆಗಳ ಡಿಜಿಟಲೀಕರಣ, ಸಿಬ್ಬಂದಿಗಳ ಕಲ್ಯಾಣ ಹಾಗೂ ಆದಾಯ ವೃದ್ಧಿಗೆ ಹಲವು ಮಹತ್ವದ ಕ್ರಮಗಳು ಜಾರಿಗೆ ಬಂದಿವೆ. ಬಸ್ ಸೇವೆಗಳ ಸುಧಾರಣೆ, ಹೊಸ ಮಾರ್ಗಗಳ ಆರಂಭ, ತಂತ್ರಜ್ಞಾನ ಆಧಾರಿತ ಟಿಕೆಟ್ ವ್ಯವಸ್ಥೆ, ರಸ್ತೆ ಸುರಕ್ಷತಾ ಅಭಿಯಾನಗಳು ಸೇರಿದಂತೆ ಅನೇಕ ಜನಹಿತ ಯೋಜನೆಗಳು ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿವೆ.
ಗ್ರಾಮೀಣದಿಂದ ನಗರವರೆಗೆ ಸಮಾನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಕೈಗೊಂಡ ನಿರ್ಣಯಗಳು ಸಾರ್ವಜನಿಕರ ಮೆಚ್ಚುಗೆ ಪಡೆದಿವೆ. ಆಡಳಿತಾತ್ಮಕ ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಕಾರ್ಯವೈಖರಿಯಿಂದ ಇಲಾಖೆ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ರಾಜ್ಯ ಸಾರಿಗೆ ಕ್ಷೇತ್ರದಲ್ಲಿ ಸ್ಥಿರತೆ, ಸುಧಾರಣೆ ಮತ್ತು ಸೇವಾ ಗುಣಮಟ್ಟಕ್ಕೆ ಒತ್ತು ನೀಡಿದ ಸಚಿವ ರಾಮಲಿಂಗಾ ರೆಡ್ಡಿ ಅವರ 7 ವರ್ಷಗಳ ಸೇವಾ ಪಯಣವನ್ನು ವಿವಿಧ ವಲಯಗಳು ಅಭಿನಂದಿಸಿವೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ನಡೆದಿದ್ದು, 10,000ಕ್ಕೂ ಹೆಚ್ಚು ಸಿಬ್ಬಂದಿಗಳ ನೇಮಕಾತಿ ಮೂಲಕ ಉದ್ಯೋಗಾವಕಾಶ ಸೃಷ್ಟಿಸಲಾಗಿದೆ. ಇದರ ಜೊತೆಗೆ, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 4,000ಕ್ಕೂ ಹೆಚ್ಚು ಹೊಸ ಬಸ್‌ಗಳನ್ನು ಸೇವೆಗೆ ಸೇರಿಸಲಾಗಿದ್ದು, ರಾಜ್ಯದ ನಗರ ಹಾಗೂ ಗ್ರಾಮೀಣ ಸಾರಿಗೆ ಜಾಲ ಮತ್ತಷ್ಟು ಬಲಗೊಂಡಿದೆ.
ಜನಪರ ಯೋಜನೆಯಾದ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಹೊಸ ದಿಕ್ಕು ನೀಡಿದೆ. ಈ ಯೋಜನೆ ದೇಶಾದ್ಯಂತ ಮಾದರಿಯಾಗಿ ಗುರುತಿಸಿಕೊಂಡಿದೆ.
ಸಚಿವರ ನಾಯಕತ್ವದಲ್ಲಿ ಸಾರಿಗೆ ಇಲಾಖೆ ಸೇವಾ ಗುಣಮಟ್ಟ, ಆಡಳಿತ ಸುಧಾರಣೆ ಮತ್ತು ನಾವೀನ್ಯತೆಗಾಗಿ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಡಿಜಿಟಲೀಕರಣ, ರಸ್ತೆ ಸುರಕ್ಷತೆ, ಪರಿಸರ ಸ್ನೇಹಿ ಕ್ರಮಗಳು ಹಾಗೂ ಸಿಬ್ಬಂದಿಗಳ ಕಲ್ಯಾಣಕ್ಕೆ ಒತ್ತು ನೀಡಿರುವುದು ಇಲಾಖೆಯ ಗೌರವ ಮತ್ತಷ್ಟು ಹೆಚ್ಚಿಸಿದೆ. ಇವರ ಯಶಸ್ವಿ ಪಯಣ ಹೀಗೆ ಸಾಗಲಿ ಎಂಬುದು voiceofKarnataka.in ತಂಡದ ಹಾರೈಕೆ.



Post Comment