ನೂತನ ಅಧ್ಯಕ್ಷರಾಗಿ ಡಾ. ಟಿ. ವಿನಯ ಕುಮಾರ್ ಉಪಾಧ್ಯಕ್ಷರಾಗಿ ಡಾ. ಲತಾ ಟಿ.ಎಸ್ ಪದಗ್ರಹಣ
ಬೆಂಗಳೂರು, ಜನವರಿ 06, 2026:
ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ವತಿಯಿಂದ ಪದಗ್ರಹಣ ಮತ್ತು ಹಸ್ತಾಂತರ ಸಮಾರಂಭವನ್ನು ಬೆಂಗಳೂರು ಜೆ.ಪಿ.ನಗರದ ಸಾಂಸ್ಕೃತಿಕ ಸಂಘದಲ್ಲಿ ಗೌರವಪೂರ್ಣವಾಗಿ ಆಯೋಜಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ. ದೇವಾನಂದ ಗೋಪಾಲ್ (ಡಿಆರ್ಡಿಒ ಮಾಜಿ ವಿಜ್ಞಾನಿ) ಉಪಸ್ಥಿತರಿದ್ದು, ಎಂ.ಬಿ. ಜಯರಾಮ್ (ಚೇರ್ಮನ್ ಎಮೆರಿಟಸ್ ಹಾಗೂ ಮುಖ್ಯ ಮಾರ್ಗದರ್ಶಕರು) ಮತ್ತು ಗೀತಾ ಶಂಕರ್ (ರಾಷ್ಟ್ರೀಯ ಅಧ್ಯಕ್ಷರು) ಗೌರವಾನ್ವಿತವಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಡಾ. ಟಿ. ವಿನಯ ಕುಮಾರ್ ಅವರು ಪಿಆರ್ಸಿಐ ಆಡಳಿತ ಮಂಡಳಿಯ (ಗವರ್ನಿಂಗ್ ಕೌನ್ಸಿಲ್) ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಕೆಎಸ್ಆರ್ಟಿಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್. ಅವರು ಉಪಾಧ್ಯಕ್ಷರಾಗಿ, ಚಿನ್ಮಯೀ ಪ್ರವೀಣ್ ಅವರು ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ಸ್ವೀಕರಿಸಿದರು.
ಆಡಳಿತ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ಡಾ. ಬಿ.ಕೆ. ರವಿ (ಉಪಕುಲಪತಿ, ಉತ್ತರ ಬೆಂಗಳೂರು ವಿಶ್ವವಿದ್ಯಾಲಯ), ರವೀಂದ್ರನ್, ಸಿ.ಜೆ. ಸಿಂಗ್, ಆರ್.ಎನ್. ಮಹಾಪಾತ್ರ ಮತ್ತು ಅರಿಜಿತ್ ಸಿಂಗ್ ಅವರು ಪದಗ್ರಹಣ ಮಾಡಿದರು.
ಇದೇ ವೇಳೆ ಡಾ. ಪ್ರಶಾಂತ್ ವೇಣುಗೋಪಾಲ್ ಅವರು ಯಂಗ್ ಕಮ್ಯುನಿಕೇಟರ್ಸ್ ಕ್ಲಬ್ನ ರಾಷ್ಟ್ರೀಯ ಮುಖ್ಯಸ್ಥರಾಗಿ ಹಾಗೂ ಪಶುಪತಿ ಶರ್ಮಾ ಅವರು ಪಿಆರ್ಸಿಐ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.
ಸಾರ್ವಜನಿಕ ಸಂಪರ್ಕ ಕ್ಷೇತ್ರದ ಬೆಳವಣಿಗೆ, ವೃತ್ತಿಪರ ಮೌಲ್ಯಗಳು ಮತ್ತು ಸಂವಹನದ ಮಹತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.



Post Comment