‘ಟ್ರೀ ಮ್ಯಾನ್ ಹ್ಯಾರಿಸ್’ ಟ್ರೆಂಡ್: ಹಸಿರು ಕ್ರಾಂತಿಗೆ ಜನರ ಮೆಚ್ಚುಗೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಅಂಗವಾಗಿ 15 ಲಕ್ಷ ಗಿಡ ನೆಡುವ ಬೃಹತ್ ಹಸಿರು ಅಭಿಯಾನ ಅಧಿಕೃತವಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪಟ್ಟಿಗೆ ಸೇರ್ಪಡೆಯಾಗಿದೆ.
ಈ ಐತಿಹಾಸಿಕ ಸಾಧನೆಗೆ ಸಂಬಂಧಿಸಿದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ತೀರ್ಪುಗಾರ ರಿಷಿನಾಥ್ ಅವರು ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಈ ಸಾಧನೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರ ಹೆಸರು ಭಾರೀ ಚರ್ಚೆಗೆ ಗ್ರಾಸವಾಗಿದ್ದು, “Tree Man Haris” (ಟ್ರೀ ಮ್ಯಾನ್ ಹ್ಯಾರಿಸ್) ಎಂಬ ಶೀರ್ಷಿಕೆಯಡಿ ಟ್ರೆಂಡ್ ಆರಂಭವಾಗಿದೆ.
ನಗರವನ್ನು ಮತ್ತಷ್ಟು ಹಸಿರುಮಯವಾಗಿಸುವ ಉದ್ದೇಶದಿಂದ ರೂಪಿಸಲಾದ ಈ ಬೃಹತ್ ಗಿಡ ನೆಡುವ ಅಭಿಯಾನದ ಹಿಂದಿನ ಪ್ರಮುಖ ಕಲ್ಪನೆ ಹಾಗೂ ನಾಯಕತ್ವಕ್ಕಾಗಿ ಹ್ಯಾರಿಸ್ ಅವರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಬೆಂಗಳೂರಿನ ಭವಿಷ್ಯವನ್ನು ಹಸಿರುಮಯಗೊಳಿಸುವ ನಿಟ್ಟಿನಲ್ಲಿ ಈ ಸಾಧನೆ ಮಹತ್ವದ ಮೈಲಿಗಲ್ಲು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



Post Comment