ಬೆಂಗಳೂರು: ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಖಾತೆಯ ಸಚಿವರಾದ ರಾಮಲಿಂಗಾರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಕ.ಕ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ.ರಾಚಪ್ಪ ಮತ್ತು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿಜಯಕುಮಾರ್ ಅವರು ಒಡಂಬಡಿಕೆ ವಿನಿಮಯ ಸಾರಿಗೆ ಸಚಿವರ ಸಮ್ಮುಖದಲ್ಲಿ ದಿನಾಂಕ: 03-12-2024 ರಂದು ಮಾಡಿಕೊಳ್ಳಲಾಯಿತು.
ಈ ಒಡಂಬಡಿಕೆಯಲ್ಲಿ ನಿಗಮದ ನೌಕರರ ವೇತನ ಖಾತೆಗಳನ್ನು ಕೆನರಾ ಬ್ಯಾಂಕಿನ “ಪೇ-ರೋಲ್ ಪ್ಯಾಕೇಜ್ ಸ್ಕೀಮ್” ಅಡಿಯಲ್ಲಿ ತೆರೆದು ಸದರಿ ವಿಮಾ ಸೌಲಭ್ಯವನ್ನು ಎಲ್ಲಾ ನೌಕರರು ಶುಲ್ಕ ರಹಿತವಾಗಿ ಪಡೆಯಬಹುದಾಗಿರುತ್ತದೆ.
ಸಚಿವರು ನಿಗಮದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತದಿಂದಾಗಿ ಆಗುತ್ತಿರುವ ಸಾವು-ನೋವುಗಳ ಪ್ರಮಾಣವನ್ನು ಗಮನಿಸಿ,ನಿಗಮವು ನೌಕರರ ವೈಯಕ್ತಿಕ ಮತ್ತು ಕರ್ತವ್ಯ ನಿರತ ಸಮಯದಲ್ಲಿ ಅಪಘಾತದಿಂದಾಗಿ ನೌಕರರು ನಿಧನರಾದಲ್ಲಿ ರೂ.1.00ಕೋಟಿ ಗಳ ಅಪಘಾತ ವಿಮೆಯ ಪರಿಹಾರ ಮೊತ್ತವನ್ನು ಹಾಗೂ ಡೆಬೀಟ್ ಕಾರ್ಡ ಹೊಂದಿದಲ್ಲಿ ರೂ.6 ಲಕ್ಷ ದಿಂದ ರೂ.14 ಲಕ್ಷ ಹಾಗೂ ಪ್ರೀಮಿಯಂ ರಹಿತ ರೂ.1 ಲಕ್ಷ ದಿಂದ ರೂ.6 ಲಕ್ಷಗಳವರೆಗೆ ಉಚಿತ “Term Insurance” ಪಾಲಿಸಿಯನ್ನು ನಾಮನಿರ್ದೇಶಿತರಿಗೆ ವಿತರಿಸಲಾಗುವುದುವೆಂದು ತಿಳಿಸಿದರು.
ಅಪಘಾತದಿಂದಾಗಿ ಅಂಗನ್ಯೂನ್ಯತೆ ಉಂಟಾದಲ್ಲಿ ಗಣನೀಯ ಮೊತ್ತದಷ್ಟು ಪರಿಹಾರ ಮೊತ್ತವನ್ನು ನೌಕರರಿಗೆ ದೊರಕಿಸಿಕೊಡುವ ಯೋಜನೆಯನ್ನು ರೂಪಿಸಿರುವುದಕ್ಕೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ಕ.ಕ.ರ.ಸಾ.ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ, ವಿತವ್ಯಯ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ, ನೌಕರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿರುತ್ತದೆ. ನಿಗಮದಲ್ಲಿ ಈಗಾಗಲೇ ಎಸ್.ಬಿ.ಐ ಬ್ಯಾಂಕಿನಲ್ಲಿ, ಯೂನಿಯನ್ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ನೌಕರರು ಅಪಘಾತ ವಿಮೆಗೆ ಒಳಪಟ್ಟಿರುತ್ತಾರೆ.
ಈ ಬ್ಯಾಂಕುಗಳನ್ನು ಹೊರತುಪಡಿಸಿ ಕೆನರಾ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ಸುಮಾರು 3000 ನೌಕರರಿಗೂ ಕೂಡ ಅಪಘಾತ ವಿಮೆಯ ಸೌಲಭ್ಯವನ್ನು ವಿಸ್ತರಿಸುವುದು ಅವಶ್ಯಕತೆ ಇರುವುದನ್ನು ಮನಗಂಡು ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಗಮದ ನೌಕರರಿಗೆ ಅಪಘಾತ ವಿಮೆ ಸೌಲಭ್ಯವನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು. ಅಪಘಾತ ಹೊರತುಪಡಿಸಿ, ಇತರೇ ನೈರ್ಸಗಿಕ ಸಾವುಗಳಿಗೆ ಕೆನರಾ ಬ್ಯಾಂಕಿನವರು ಪ್ರೀಮಿಯಂ ರಹಿತ ರೂ. 6 ಲಕ್ಷಗಳವರೆಗೆ ಉಚಿತ “Term Insurance” ಪಾಲಿಸಿಯನ್ನು ನೀಡುತ್ತಾರೆ ಅಲ್ಲದೆ ನೌಕರರ ಮಕ್ಕಳ ವಿಧ್ಯಾಬ್ಯಾಸ, ಗೃಹ ಸಾಲ ಹಾಗೂ ವೈಯಕ್ತಿಕ ಮತ್ತು ವಾಹನ ಸಾಲಗಳಲ್ಲಿ ವಿಶೇಷ ಬಡ್ಡಿ ದರವನ್ನು ನೀಡುತ್ತಾರೆಂದು ಸಭೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರವರು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಮತ್ತು ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Post Comment