×

ಸ್ವಚ್ಛ ವಾಯು ಸರ್ವೇಕ್ಷಣ್ 2026, ಘನತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ಸಾಧನೆ: ಸ್ವಚ್ಛ ವಾಯು ಸರ್ವೇಕ್ಷಣ್‌ನಲ್ಲಿ ಕೋರಮಂಗಲ ವಾರ್ಡ್‌ಗೆ ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ಭಾರತ ಸರ್ಕಾರದ ಸ್ವಚ್ಛ ವಾಯು ಸರ್ವೇಕ್ಷಣ್ 2026ರ ಪ್ರಶಸ್ತಿಗಳಲ್ಲಿ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದ್ದು, ಬೆಂಗಳೂರಿನ ಕೋರಮಂಗಲ ವಾರ್ಡ್ ಸೇರಿದಂತೆ ರಾಜ್ಯದ ಮೂರು ವಾರ್ಡ್‌ಗಳು ವಿವಿಧ ಜನಸಂಖ್ಯಾ ವಿಭಾಗಗಳಲ್ಲಿ ಪ್ರಶಸ್ತಿಗೆ ಭಾಜನವಾಗಿವೆ.

30,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ವಾರ್ಡ್‌ಗಳ ವಿಭಾಗದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕೋರಮಂಗಲ ವಾರ್ಡ್ ಸಂಖ್ಯೆ 151 ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಮೂಲಕ ಬೆಂಗಳೂರಿನ ಕೋರಮಂಗಲ ವಾರ್ಡ್ ಸ್ವಚ್ಛ ವಾಯು ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮೆರೆದಿದೆ.

ಇನ್ನು 10,000ರಿಂದ 30,000 ಜನಸಂಖ್ಯೆ ಹೊಂದಿರುವ ವಾರ್ಡ್‌ಗಳ ವಿಭಾಗದಲ್ಲಿ ದಾವಣಗೆರೆ ನಗರದ ವಾರ್ಡ್ ಸಂಖ್ಯೆ 36 ರಾಜ್ಯ ಮಟ್ಟದ ಪ್ರಶಸ್ತಿಗೆ ಪಾತ್ರವಾಗಿದ್ದರೆ, 10,000ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ವಾರ್ಡ್‌ಗಳ ವಿಭಾಗದಲ್ಲಿ ದಾವಣಗೆರೆಯ ವಾರ್ಡ್ ಸಂಖ್ಯೆ 07 ಪ್ರಶಸ್ತಿ ಪಡೆದುಕೊಂಡಿದೆ.

ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆ, ಸ್ವಚ್ಛತೆ, ಹಸಿರು ಪರಿಸರ ನಿರ್ಮಾಣ ಹಾಗೂ ನಾಗರಿಕರ ಸಹಭಾಗಿತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಗೊಂಡ ಪರಿಣಾಮಕಾರಿ ಕ್ರಮಗಳಿಗೆ ಈ ಪ್ರಶಸ್ತಿಗಳು ದೊರೆತಿವೆ. ಬೆಂಗಳೂರಿನ ಕೋರಮಂಗಲ ಹಾಗೂ ದಾವಣಗೆರೆಯ ವಾರ್ಡ್‌ಗಳ ಸಾಧನೆಯು ಕರ್ನಾಟಕದ ಪರಿಸರ ಸ್ನೇಹಿ ನಗರಾಭಿವೃದ್ಧಿಯ ಪ್ರಯತ್ನಗಳಿಗೆ ಮತ್ತಷ್ಟು ಮೆರುಗು ತಂದಿದೆ.

ಈ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಬಿ.ಟಿ.ಎಂ. ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದe ರಾಮಲಿಂಗಾ ರೆಡ್ಡಿ ಅವರು, ಅಧಿಕಾರಿಗಳು, ಜನಪ್ರತಿನಿಧಿಗಳು, ಪೌರಕಾರ್ಮಿಕರು ಹಾಗೂ ನಾಗರಿಕರ ಸಾಮೂಹಿಕ ಪ್ರಯತ್ನದಿಂದ ಕರ್ನಾಟಕಕ್ಕೆ ಈ ಗೌರವ ಲಭಿಸಿದೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಸ್ವಚ್ಛ ಮತ್ತು ಆರೋಗ್ಯಕರ ನಗರ ಪರಿಸರ ನಿರ್ಮಾಣದ ದಿಕ್ಕಿನಲ್ಲಿ ಈ ಪ್ರಶಸ್ತಿಗಳು ರಾಜ್ಯದ ಇತರೆ ನಗರ ಸ್ಥಳೀಯ ಸಂಸ್ಥೆಗಳಿಗೂ ಪ್ರೇರಣೆಯಾಗಲಿವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed