×

ಕೆಎಸ್‌ಆರ್‌ಟಿಸಿ ಗೆ 3 ರಾಷ್ಟ್ರಮಟ್ಟದ AdWorld Showdown ಪ್ರಶಸ್ತಿಗಳು

ನವದೆಹಲಿ, ಏಪ್ರಿಲ್ 10, 2026: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ನವೀನ ಸೇವೆಗಳು ಮತ್ತು ಪ್ರಯಾಣಿಕ ಸ್ನೇಹಿ ಉಪಕ್ರಮಗಳಿಗಾಗಿ ರಾಷ್ಟ್ರಮಟ್ಟದ AdWorld Showdown ಪ್ರಶಸ್ತಿಯಲ್ಲಿ ಮೂರು ಪ್ರಮುಖ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

Best Customer Acquisition & Retention ವಿಭಾಗದಲ್ಲಿ ನಿಗಮದ ಬಸ್ ಬ್ರ್ಯಾಂಡಿಂಗ್‌ಗೆ ಪ್ರಶಸ್ತಿ ಲಭಿಸಿದ್ದು, Best Use of Technology ವಿಭಾಗದಲ್ಲಿ AWATAR 4.0 (UPI ಸೌಲಭ್ಯ ಸಮೇತ) ವ್ಯವಸ್ಥೆಗೆ ಗೌರವ ದೊರೆತಿದೆ. ಜೊತೆಗೆ, ನಿಗಮದ ಮಾನವ ಸಂಪನ್ಮೂಲ ಹಾಗೂ ಆರೋಗ್ಯ ಉಪಕ್ರಮಗಳಿಗೂ ಪ್ರಶಸ್ತಿ ಸಂದಿದೆ.

AWATAR 4.0 ವ್ಯವಸ್ಥೆಯ ಮೂಲಕ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆ, ನೈಜ-ಸಮಯ ಆಸನ ಮಾಹಿತಿ ಹಾಗೂ ನಗದುರಹಿತ UPI ಪಾವತಿ ವ್ಯವಸ್ಥೆಗಳು ಸುಲಭವಾಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸಿದೆ.
ಇನ್ನು, ಅಂಬಾರಿ ಉತ್ಸವ, ಪಲ್ಲಕ್ಕಿ, ಐರಾವತ ಕ್ಲಬ್ ಕ್ಲಾಸ್ 2.0 ಹಾಗೂ ಅಶ್ವಮೇಧ ಬಸ್ಸುಗಳ ಬ್ರ್ಯಾಂಡಿಂಗ್ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಈ ಸಾಧನೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಧಿ ಎಸ್ ಮಿತ್ತಲ್, ಮಾರ್ಕೆಟಿಂಗ್ ಲೀಡರ್, ಹುಲ್ಟ್ ಇಂಟರ್ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ನಿಗಮದ ಪರವಾಗಿ ಎಂ.ಪಿ. ಶ್ರೀಹರಿ ಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಪುತ್ತೂರು ವಿಭಾಗ ಮತ್ತು ಎಸ್.ಎಸ್. ದಶರಥ್, ವಿಭಾಗೀಯ ನಿಯಂತ್ರಣಾಧಿಕಾರಿ, ಹಾಸನ ವಿಭಾಗ, ಪ್ರಶಸ್ತಿಯನ್ನು ಸ್ವೀಕರಿಸಿದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed