ಮಂಗಳೂರು: ಮಂಗಳೂರಿನ ಲಾಲ್ಬಾಗ್ನಲ್ಲಿ ನಡೆದ 10 ವರ್ಷ ವಯೋಮಾನದ ಮಕ್ಕಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ತೈಕ್ವಾಂಡೋ ಚಾಂಪಿಯನ್ಶಿಪ್ ಹಾಗೂ G4 ರಾಜ್ಯ ಮಟ್ಟದ ತೈಕ್ವಾಂಡೋ ಚಾಂಪಿಯನ್ಶಿಪ್ – ಶೃಂಗೇರಿ ತೈಕ್ವಾಂಡೋ ಕಪ್ 2025 ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಪಾಣೆಮಂಗಳೂರು, ನೆಹರೂ ನಗರಕ್ಕೆ ಸೇರಿದ ಖತೀಜಾ ಆಶಿಫಾ ಚಿನ್ನದ ಪದಕ ಭಾಜನರಾಗಿದ್ದಾಳೆ.
ಫಾತಿಮಾ (ಸೌರತ್) ಮತ್ತು ಅಬೂಸಾಲಿ ದಂಪತಿಯ ಪುತ್ರಿಯಾದ ಆಶಿಫಾ, ಗೂಡಿನಬಲಿಯ ಹಯಾತುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಈ ಮೇಲುಗೈ ಸಾಧನೆಗೆ ಪ್ರಧಾನ ತರಬೇತುದಾರರಾದ ಆಸಿಫ್ ಕಿನ್ಯಾ ಮತ್ತು ಸಯ್ಯದ್ ಶಿಹಾಬ್ T ಅವರ ಶ್ರದ್ಧಾಪೂರ್ಣ ಮಾರ್ಗದರ್ಶನ ಕಾರಣವಾಗಿದೆ. ಜೊತೆಗೆ ಮುಹಮ್ಮದ್ ಫರ್ಜೀನ್ ಹುಸೇನ್, ಮೊಹಮ್ಮದ್ ಸಾವಾದ್ ನಂದಾವರ, ಆಯಾಜ್ ಬರ್ವಾ, ಕಾರ್ತಿಕ್ M, ಹರಿಸ್ ಸುಣ್ಣತ್ಕೆರೆ ಮತ್ತು ಆಯಿಷಾ ಹೈಫಾ ಅವರ ಸಮರ್ಪಿತ ತರಬೇತಿ ಸಹಕಾರ ಆಶಿಫಾ ಯಶಸ್ಸಿಗೆ ಬಲವರ್ಧಕವಾಗಿದೆ.
ಸತತ ಪರಿಶ್ರಮ, ಶಿಸ್ತಿನ ಅಭ್ಯಾಸ ಮತ್ತು ತರಬೇತುದಾರರ ಸೂಕ್ಷ್ಮ ಮಾರ್ಗದರ್ಶನದ ಫಲವಾಗಿ ಆಶಿಫಾ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾಳೆ.
ಈ ಸಾಧನೆಗೆ ಶಾಲಾ ನಿರ್ವಹಣಾ ಮಂಡಳಿ, ಶಿಕ್ಷಕರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.



Post Comment