ನವದೆಹಲಿ, ಮಾರ್ಚ್ 28: Karnataka State Road Transport Corporation (ಕೆಎಸ್‌ಆರ್‌ಟಿಸಿ) ತನ್ನ “ಪಾರದರ್ಶಕ ನೇಮಕಾತಿ ಮತ್ತು ಪರಿಣಾಮಕಾರಿ ತರಬೇತಿ ಕಾರ್ಯಕ್ರಮ”ಕ್ಕಾಗಿ ಪ್ರತಿಷ್ಠಿತ Skoch National Award-2026 ಅನ್ನು ಪಡೆದುಕೊಂಡಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು India Habitat Centre, ನವದೆಹಲಿಯಲ್ಲಿ ಭವ್ಯವಾಗಿ ನೆರವೇರಿತು.
ನಿಗಮವು ಅರ್ಜಿ ಸಲ್ಲಿಕೆದಿಂದ ಅಂತಿಮ ಆಯ್ಕೆ ಪ್ರಕ್ರಿಯೆಯವರೆಗೆ ಪಾರದರ್ಶಕತೆ ಮತ್ತು ಏಕರೂಪತೆಯನ್ನು ಕಾಪಾಡಿಕೊಂಡಿದ್ದು, ಮಾನವ ಹಸ್ತಕ್ಷೇಪವನ್ನು ಕಡಿಮೆಗೊಳಿಸಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಸ್ವಯಂ ಚಾಲಿತ ಚಾಲನಾ ಪರೀಕ್ಷೆ, ಆನ್‌ಲೈನ್ ಪರೀಕ್ಷೆಗಳು, ದಾಖಲೆಗಳ ಡಿಜಿಟಲ್ ಪರಿಶೀಲನೆ, ವೆಬ್ ಕ್ಯಾಸ್ಟಿಂಗ್ ಹಾಗೂ ಆಟೋ ಜನರೇಟೆಡ್ ಅಂಕಪಟ್ಟಿ ಮೂಲಕ ಸುಮಾರು 2000 ಚಾಲಕ/ನಿರ್ವಾಹಕರು, 300 ತಾಂತ್ರಿಕ ಸಿಬ್ಬಂದಿ ಹಾಗೂ 441 ಅನುಕಂಪ ಆಧಾರಿತ ಹುದ್ದೆಗಳ ನೇಮಕಾತಿ ನಡೆಸಲಾಗಿದೆ.

ಇದಲ್ಲದೆ, ಕಳೆದ ಆರು ತಿಂಗಳಲ್ಲಿ 12,000ಕ್ಕೂ ಹೆಚ್ಚು ಸಿಬ್ಬಂದಿಗೆ ಪರಿಣಾಮಕಾರಿ ತರಬೇತಿ ನೀಡಿರುವುದು ನಿಗಮದ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಿದೆ.
1997ರಲ್ಲಿ ಸ್ಥಾಪಿತವಾದ Skoch Foundation ಸಂಸ್ಥೆಯು 2003ರಿಂದ ದೇಶದ ವಿವಿಧ ಸಂಸ್ಥೆಗಳ ಉತ್ತಮ ಆಡಳಿತ, ತಾಂತ್ರಿಕತೆ ಅಳವಡಿಕೆ, ಪಾರದರ್ಶಕ ನೀತಿ ಮತ್ತು ಆಂತರಿಕ ಬೆಳವಣಿಗೆಯನ್ನು ಆಧರಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ Akram Pasha ಅವರು, ಸ್ಕಾಚ್ ಫೌಂಡೇಶನ್ ಅಧ್ಯಕ್ಷರಾದ Sameer Kochhar ಮತ್ತು ಉಪಾಧ್ಯಕ್ಷರಾದ Dr. Gurucharan Dhanjal ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಾಧನೆ ರಾಜ್ಯ ಸಾರಿಗೆ ನಿಗಮದ ಪಾರದರ್ಶಕ ಆಡಳಿತ ಮತ್ತು ತಂತ್ರಜ್ಞಾನಾಧಾರಿತ ಅಭಿವೃದ್ಧಿಗೆ ಮತ್ತೊಂದು ಮೈಲುಗಲ್ಲಾಗಿದೆ.



Post Comment