ಮಧುಗಿರಿಯಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ನೂತನ ಕಟ್ಟಡ ಹಾಗೂ ಸ್ವಯಂಚಾಲಿತ ವಾಹನ ಚಾಲನಾ ಪರೀಕ್ಷಾ ಪಥದ ಶಂಕುಸ್ಥಾಪನೆ ಇಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ನೆರವೇರಿತು.

ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ದೇಶದಲ್ಲಿಯೇ ಅತಿಹೆಚ್ಚು ಸ್ವಯಂಚಾಲಿತ ಚಾಲನಾ ಪಥಗಳನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆ ಕರ್ನಾಟಕಕ್ಕೆ ಸಲ್ಲುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಈಗಾಗಲೇ 7 ಟ್ರ್ಯಾಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ವರ್ಷ 10 ಹೊಸ ಟ್ರ್ಯಾಕ್‌ಗಳು ಚಾಲನೆಗೊಂಡಿವೆ. 28 ಟ್ರ್ಯಾಕ್‌ಗಳ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ರಾಜ್ಯದಲ್ಲಿ ಒಟ್ಟಾರೇ 45 ಟ್ರ್ಯಾಕ್‌ಗಳು ಕಾರ್ಯ ನಿರ್ವಹಿಸಲಿವೆ ಎಂದು ಸಚಿವರು ತಿಳಿಸಿದರು.

ಮಧುಗಿರಿಯಲ್ಲಿ 3.14 ಎಕರೆ ವಿಸ್ತೀರ್ಣದಲ್ಲಿ ₹11.50 ಕೋಟಿಯ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಮತ್ತು ಸಾರಿಗೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ತಾಲ್ಲೂಕಿಗೆ ಬಸ್‌ಗಳ ಹೆಚ್ಚುವರಿ ವ್ಯವಸ್ಥೆ ಹಾಗೂ ಬಸ್ ನಿಲ್ದಾಣದ ನವೀಕರಣಕ್ಕೂ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

ಸ್ವಯಂಚಾಲಿತ ಚಾಲನಾ ಪಥವು ಪಾರದರ್ಶಕತೆ ಮತ್ತು ದಕ್ಷತೆಯೊಂದಿಗೆ ಗುಣಮಟ್ಟದ ಚಾಲಕರನ್ನು ರೂಪಿಸುವಲ್ಲಿ ಸಹಕಾರಿ. ಮಾನವ ಹಸ್ತಕ್ಷೇಪವಿಲ್ಲದೆ ನಡೆಯುವ ಪರೀಕ್ಷೆಗಳು ಅಪಘಾತ ಕಡಿತಕ್ಕೆ ಮಹತ್ವದ ಪಾತ್ರವಹಿಸಲಿವೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಎನ್. ರಾಜಣ್ಣ (ಶಾಸಕರು), ಅಕ್ರಂ ಪಾಷ ಭಾಆಸೇ (ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ), ಜಂಟಿ ಆಯುಕ್ತೆ ಓಂಕಾರೇಶ್ವರಿ, ಜಂಟಿ ಸಾರಿಗೆ ಆಯುಕ್ತೆ ಗಾಯತ್ರಿದೇವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ. ಪ್ರಸಾದ್ ಅವರು ಉಪಸ್ಥಿತರಿದ್ದರು.



Post Comment