ದಸರಾ ಹಬ್ಬದ ಪ್ರಯುಕ್ತ ಪ್ರತಿವರ್ಷದಂತೆ ಈ ಬಾರಿಯೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಿಶೇಷ ಪ್ರಯಾಣ ದರವನ್ನು ಜಾರಿಗೊಳಿಸಿದೆ.
ಸರ್ಕಾರದ ಅಧಿಸೂಚನೆಯಂತೆ ದಸರಾ ಸೇರಿದಂತೆ ಹಬ್ಬ, ಜಾತ್ರೆ ಹಾಗೂ ಸಾರ್ವಜನಿಕ ರಜೆ ದಿನಗಳಲ್ಲಿ ನಿಗಮವು ವಿಶೇಷ ಸಾರಿಗೆಗಳನ್ನು ಏರ್ಪಡಿಸಿ ಸಂಚಾರ ನಡೆಸುತ್ತದೆ. ಈ ಸಂದರ್ಭಗಳಲ್ಲಿ ವಾಹನಗಳನ್ನು ಇತರ ವಿಭಾಗಗಳಿಂದ ಪಡೆದು ಕಾರ್ಯಾಚರಣೆ ಮಾಡಬೇಕಾಗಿರುವುದರಿಂದ, ವಾಪಾಸ್ಸು ಪ್ರಯಾಣ ಖಾಲಿ ಅಥವಾ ಕಡಿಮೆ ಪ್ರಯಾಣಿಕರೊಂದಿಗೆ ನಡೆಯುವ ಕಾರಣದಿಂದ ಹೆಚ್ಚುವರಿ ವೆಚ್ಚ ಉಂಟಾಗುತ್ತದೆ. ಇದರ ಪರಿಣಾಮವಾಗಿ ವಿಶೇಷ ಪ್ರಯಾಣ ದರವನ್ನು ನಿಗದಿ ಮಾಡಲಾಗುತ್ತಿದೆ.
ಗಮನಾರ್ಹವೆಂದರೆ, ಕೆಎಸ್‌ಆರ್‌ಟಿಸಿ ಕಳೆದ 20 ವರ್ಷಗಳಿಂದ ನಿರಂತರವಾಗಿ ಈ ಕ್ರಮವನ್ನು ಅನುಸರಿಸುತ್ತಿದ್ದು, ಹಬ್ಬ-ಜಾತ್ರೆಗಳ ಅವಧಿಯಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ನಿರಂತರ ಸಾರಿಗೆ ಸೇವೆಗಳನ್ನು ಒದಗಿಸುತ್ತಿದೆ.
ಅದರಂತೆ, ಈ ವರ್ಷ 2025ರ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 8ರವರೆಗೆ ಬೆಂಗಳೂರು-ಮೈಸೂರು ಮಾರ್ಗದಲ್ಲಿ ದಸರಾ ವಿಶೇಷ ದರ ಜಾರಿಯಲ್ಲಿರಲಿದೆ. ವೇಗದೂತ, ತಡೆರಹಿತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಕ್ರಮವಾಗಿ ರೂ.20/- ಮತ್ತು ರೂ.30/- ಹೆಚ್ಚುವರಿ ಶುಲ್ಕ ವಸೂಲಿಸಲಾಗುವುದು ಎಂದು ತಿಳಿಸಿದೆ.



Post Comment