15 ವರ್ಷಗಳ ನಿರೀಕ್ಷೆಯ ಬಳಿಕ ಈಜಿಪುರ–ಓಆರ್‌ಆರ್ ಸಂಪರ್ಕ ರಸ್ತೆ ಕಾಮಗಾರಿ ಪ್ರಾರಂಭ
ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ವಿಶೇಷ ಅನುದಾನದಿಂದ ಕೈಗೊಂಡಿರುವ ರೂ.47 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಯೋಜನೆಗೆ ಇಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದರು.
ಈ ಯೋಜನೆಯಡಿ, ಈಜಿಪುರ ಒಳ ರಿಂಗ್ ರಸ್ತೆ (ಶ್ರೀನಿವಾಗಿಲು) ಯಿಂದ ಸರಜಾಪುರ ಮುಖ್ಯ ರಸ್ತೆ (ಓಆರ್‌ಆರ್) ವರೆಗೆ 80 ಅಡಿ ಅಗಲದ (24 ಮೀಟರ್) ಸಂಪರ್ಕ ರಸ್ತೆ ನಿರ್ಮಾಣ, ರಕ್ಷಣಾ ಭೂಮಿ ತೋಟಗಾರಿಕೆ ಕೆಲಸ (ಪ್ರಥಮ ಹಂತ – 5.34 ಏಕರೆ) ಸೇರಿದಂತೆ ಒಟ್ಟು 3 ಕಿಲೋಮೀಟರ್ ಉದ್ದದ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ.
2015ರ ಮಾಸ್ಟರ್‌ಪ್ಲಾನ್‌ನಲ್ಲಿ ಈ ಸಂಪರ್ಕ ರಸ್ತೆ ಕಲ್ಪಿಸಲಾಗಿದ್ದರೂ, ರಕ್ಷಣಾ ಇಲಾಖೆಯಿಂದ ಭೂಮಿ ಹಸ್ತಾಂತರ ವಿಳಂಬವಾದ ಕಾರಣ ಕೆಲಸ ದೀರ್ಘಕಾಲ ಬಾಕಿ ಉಳಿಯಿತು. ಸುಮಾರು 15 ವರ್ಷಗಳಿಂದ ಜನರು ನಿರೀಕ್ಷಿಸುತ್ತಿದ್ದ ಯೋಜನೆ ಈಗ ಜಾರಿಯಾಗಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಬಿಜು ಶಾಂತಾರಾಮ್, ಕರ್ನಲ್ ಕೆಪಿ ರಾಜೇಂದ್ರ, ಕರ್ನಲ್ ಕುಮಾರ್, ಗೀತಾ (ಇಇ, ಬಿ-ಸ್ಮೈಲ್), ಕೊರಮಂಗಲದ ಹಲವು ಬ್ಲಾಕ್‌ಗಳ ಆರ್‌ಡಬ್ಲ್ಯುಎ ಪ್ರತಿನಿಧಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.



Post Comment