ಬೆಂಗಳೂರು: ಅಂಜನಾಪುರದಲ್ಲಿ ರೂ.11.25 ಕೋಟಿ ವೆಚ್ಚದಲ್ಲಿ ನಿರ್ಮಿತ ನೂತನ ಪ್ರಾದೇಶಿಕ ಸಾರಿಗೆ ಕಛೇರಿಯನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಎಂ. ಕೃಷ್ಣಪ್ಪ, ಶಾಸಕರು, ಬೆಂಗಳೂರು ದಕ್ಷಿಣ ಉಪಸ್ಥಿತರಿದ್ದರು.
ಸಾರಿಗೆ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಚಿವರು ಮಾಹಿತಿ ನೀಡುತ್ತಾ, ಪ್ರಸ್ತುತ 7 ಸ್ವಂತ RTO ಕಟ್ಟಡಗಳು ರೂ.45.74 ಕೋಟಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇನ್ನೂ 8 ಕಟ್ಟಡಗಳ ಕಾಮಗಾರಿಗಳು ರೂ.70 ಕೋಟಿಗಳ ವೆಚ್ಚದಲ್ಲಿ ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಮಧುಗಿರಿ ಮತ್ತು ಹೊನ್ನಾವರ RTO ಕಟ್ಟಡಗಳು ರೂ.10.05 ಕೋಟಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.
ಡ್ರೈವಿಂಗ್ ಟ್ರ್ಯಾಕ್‌ಗಳ ಅಭಿವೃದ್ಧಿ:
- 9 ಡ್ರೈವಿಂಗ್ ಟ್ರ್ಯಾಕ್‌ಗಳು ರೂ.44.21 ಕೋಟಿಗಳಲ್ಲಿ ಪೂರ್ಣಗೊಂಡಿವೆ.
- 28 ಡ್ರೈವಿಂಗ್ ಟ್ರ್ಯಾಕ್ ಕಾಮಗಾರಿಗಳು ರೂ.203 ಕೋಟಿಗಳಲ್ಲಿ ಪ್ರಗತಿಯಲ್ಲಿವೆ.
- ಹೊನ್ನಾವರ, ಚಾಮರಾಜನಗರ ಹಾಗೂ ಚಿತ್ರದುರ್ಗದಲ್ಲಿ ರೂ.21 ಕೋಟಿಗಳ ವೆಚ್ಚದಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರಗಳು:
ರಾಜ್ಯದಲ್ಲಿ ಜಿಲ್ಲೆಗೆ ಒಂದರಂತೆ ಒಟ್ಟು 32 ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರಗಳನ್ನು ಪಿ.ಪಿ.ಪಿ. ಅಡಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಭಾರಿ ವಾಹನ ಚಾಲಕರ ತರಬೇತಿ ಕೇಂದ್ರಗಳು:
ಗುಣಮಟ್ಟದ ಚಾಲಕರನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ 4 ಭಾರಿ ವಾಹನ ಚಾಲಕರ ತರಬೇತಿ ಕೇಂದ್ರಗಳನ್ನು ರೂ.60.76 ಕೋಟಿಗಳಲ್ಲಿ ಸ್ಥಾಪಿಸಲಾಗಿದೆ.
ಇನ್ನೊಂದು ಕೇಂದ್ರದ ಕಾಮಗಾರಿ ರೂ.6.50 ಕೋಟಿಗಳಲ್ಲಿ ನಡೆಯುತ್ತಿದ್ದು, ವಿಜಯಪುರ, ಬಳ್ಳಾರಿ ಹಾಗೂ ನಾಗಮಂಗಲದಲ್ಲಿ ಹೊಸ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
👉 ಈ ಮೂಲಕ ರಾಜ್ಯದಲ್ಲಿ ಸಾರಿಗೆ ಇಲಾಖೆಯ ಸೌಲಭ್ಯಗಳು ಮತ್ತಷ್ಟು ಆಧುನಿಕವಾಗುತ್ತಿವೆ ಎಂದು ಸಚಿವರು ತಿಳಿಸಿದರು.



Post Comment