2018ರ ನಂತರ ಮೊದಲ ಬಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಪಾರದರ್ಶಕ ನೇಮಕಾತಿ
ಬೆಂಗಳೂರು: 2018ರ ನಂತರ ಬಿ.ಎಂ.ಟಿ.ಸಿ.ಯಲ್ಲಿ ಯಾವುದೇ ನೇಮಕಾತಿ ನಡೆದಿರಲಿಲ್ಲ. ಇದೀಗ ಬಹುಕಾಲದ ನಿರೀಕ್ಷೆಗೆ ತಕ್ಕ ಪ್ರತಿಯಾಗಿ, ಸಂಸ್ಥೆಯಲ್ಲಿ ಅತ್ಯಂತ ಪಾರದರ್ಶಕ ಹಾಗೂ ನ್ಯಾಯಸಮ್ಮತ ನೇಮಕಾತಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಯಾವುದೇ ಅವ್ಯವಹಾರವಿಲ್ಲದೆ, ದೂರುಗಳಿಗೆ ಅವಕಾಶವಿಲ್ಲದಂತೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದ ಮುಖಾಂತರ ಪರೀಕ್ಷೆ ನಡೆಸಿ 2,286 ನಿರ್ವಾಹಕರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಈ ನೇಮಕಾತಿ ಪ್ರಕ್ರಿಯೆ 2018ರಿಂದ ಸ್ಥಗಿತಗೊಂಡಿದ್ದ ನೇಮಕಾತಿಗೆ ಮರುಚಾಲನೆ ನೀಡಿ ತ್ವರಿತವಾಗಿ ಪೂರ್ಣಗೊಳಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಣಾ ಕಾರ್ಯಕ್ರಮವು ದಿನಾಂಕ 12-05-2025 ರಂದು ಬೆಳಗ್ಗೆ ಶಾಂತಿನಗರದ ಬಿ.ಎಂ.ಟಿ.ಸಿ. ಕೇಂದ್ರ ಕಛೇರಿಯ ಸಭಾಂಗಣದಲ್ಲಿ ನಡೆಯಲಿದ್ದು, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ನೇಮಕಾತಿ ಆದೇಶ ವಿತರಿಸಲಿದ್ದಾರೆ.
ಈ ಹೊಸ ನೇಮಕಾತಿಯಿಂದ ಬಿ.ಎಂ.ಟಿ.ಸಿ.ಯ ಸೇವಾ ಮಟ್ಟ ಸುಧಾರಿಸಲಿದ್ದು, ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಹಾಗೂ ಪರಿಣಾಮಕಾರಿ ಸಾರಿಗೆ ವ್ಯವಸ್ಥೆ ಒದಗಿಸಲಾಗುವುದು ಎಂಬ ನಂಬಿಕೆ ವ್ಯಕ್ತವಾಗಿದೆ.
Post Comment