ಪ್ರಧಾನಿ ಮೋದಿ ಅವರ ‘ಈದ್ ಕಿಟ್’ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಟ್ವೀಟ್ ವೈರಲ್
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ‘ಈದ್ ಕಿಟ್’ ನೀಡಲು ಘೋಷಿಸಿರುವುದನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಪ್ರಶ್ನಿಸಿದ್ದಾರೆ. “ರಂಜಾನ್ ಸಮಯದಲ್ಲಿ ಮುಸ್ಲಿಮರಿಗೆ ಸಹಾಯ ನೀಡುವುದು ಒಳ್ಳೆಯದು, ಆದರೆ ಕಾಂಗ್ರೆಸ್ ಇದನ್ನು ಮಾಡಿದ್ದರೆ, ಬಿಜೆಪಿ ಇದನ್ನು ‘ತುಷ್ಟೀಕರಣ ರಾಜಕಾರಣ’ ಎಂದು ಟೀಕಿಸುತ್ತಿತ್ತು” ಎಂದು ಸಚಿವ ರಾಮಲಿಂಗಾ ರೆಡ್ಡಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
“ಹಿಂದೂ ಹಬ್ಬಗಳಿಗೆ ಏಕೆ ಸಹಾಯ ಇಲ್ಲ?”
ಈ ಬಗ್ಗೆ x ನಲ್ಲಿ ಬರೆದಿರುವ ಸಚಿವ ರಾಮಲಿಂಗ ರೆಡ್ಡಿ ಅವರು, “ಉಗಾದಿ, ಬಿಹು, ವೈಶಾಖಿ, ಪೊಂಗಲ್, ಗುಡಿ ಪಡ್ವಾ ಹಾಗೂ ಇತರ ಹಿಂದೂ ಹಬ್ಬಗಳ ಸಮಯದಲ್ಲಿ ಹಿಂದೂಗಳಿಗೆ ಏಕೆ ಸರ್ಕಾರದಿಂದ ಯಾವುದೇ ವಿಶೇಷ ಸಹಾಯ ನೀಡಲಾಗುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ. “ಕಾಂಗ್ರೆಸ್ ಮಾಡಿದರೆ ‘ವೋಟ್ ಬ್ಯಾಂಕ್ ರಾಜಕಾರಣ’, ಬಿಜೆಪಿ ಮಾಡಿದರೆ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎನ್ನುವುದು ಹೇಗೆ?” ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ‘ಸೌಗಾತ್-ಎ-ಮೋದಿ’ ಯೋಜನೆ
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ‘ಸೌಗಾತ್-ಎ-ಮೋದಿ’ ಯೋಜನೆಯಡಿಯಲ್ಲಿ ಈದ್ ಕಿಟ್‌ಗಳನ್ನು ವಿತರಿಸುತ್ತಿದೆ. ಆದರೆ, ಹಿಂದೂ ಹಬ್ಬಗಳಿಗೆ ಇದೇ ರೀತಿಯ ಯೋಜನೆ ಏಕೆ ಇಲ್ಲ ಎಂಬುದು ಸಚಿವರ ಪ್ರಶ್ನೆ. “ಬಿಜೆಪಿ ಇದಕ್ಕೆ ಉತ್ತರ ನೀಡಲಿ” ಎಂದು ಅವರು ಹೇಳಿದ್ದಾರೆ.
Post Comment