ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ) ವ್ಯಾಪ್ತಿಯ ಕೋರಮಂಗಲದ “ಈಜಿಪುರ ಮೇಲ್ಸೇತುವೆ ಯೋಜನೆ” ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರು ಪ್ರತ್ಯೇಕ ಅಭಿಯಂತರ ತಂಡ ರಚಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರ ಸೂಚನೆಯ ನಂತರ, ಈ ಯೋಜನೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಯೋಜನೆಯ ನಿರ್ವಹಣೆಯನ್ನು ಕೇಂದ್ರ ಕಛೇರಿಯ ಗುಣನಿಯಂತ್ರಣ/ಗುಣಭರವಸೆ ವಿಭಾಗವು ಹೊಣೆಗೊಳ್ಳಲಿದೆ. ಡಾ. ರಾಘವೇಂದ್ರ ಪ್ರಸಾದ್ ಬಿ. ಜಿ (ಮುಖ್ಯ ಅಭಿಯಂತರರು, ಗುಣನಿಯಂತ್ರಣ/ಗುಣಭರವಸೆ) ಅವರ ನೇತೃತ್ವದಲ್ಲಿ ಕೆಳಕಂಡ ಅಭಿಯಂತರರು ಈ ಕಾಮಗಾರಿಯನ್ನು ಪೂರ್ಣಗೊಳಿಸಲು ನಿಯೋಜಿತರಾಗಿದ್ದಾರೆ:
– ಎನ್. ಚಂದ್ರಶೇಖರ್ (ಕಾರ್ಯಪಾಲಕ ಅಭಿಯಂತರರು, ಯೋಜನೆ-ಕೇಂದ್ರ/1)
– ಸಂದೇಶ್ ಶೆಟ್ಟಿ (ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಟಿ.ವಿ.ಸಿ.ಸಿ ಕಛೇರಿ)
– ರಂಜಿತ್ ಜೆ. ಎಲ್ (ಸಹಾಯಕ ಅಭಿಯಂತರರು, ಯೋಜನೆ-ಕೇಂದ್ರ/9)
ಈ ತಂಡವು ಮುಖ್ಯ ಅಭಿಯಂತರರ ಅಧೀನದಲ್ಲಿ ಕಾರ್ಯನಿರ್ವಹಿಸಿ, ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
Post Comment