×

ಕಾಂತಪುರಂ ಶೇಖ್ ಅಬೂಬಕರ್ ಅಹ್ಮದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ ಯೆನೆಪೋಯ ವಿವಿ

ಮಂಗಳೂರು: ಪ್ರಸಿದ್ದ ಮುಸ್ಲಿಂ ಧಾರ್ಮಿಕ ಪಂಡಿತ, ಕಲ್ಲಿಕೋಟೆಯ ಮರ್ಕಝ್ ಸಂಸ್ಥೆಗಳ ರೂವಾರಿ ಮುಸ್ಲಿಂ ಗ್ರಾಂಡ್ ಮುಫ್ತಿ ಕಾಂತಪುರಂ ಶೇಖ್ ಅಬೂಬಕರ್ ಅಹ್ಮದ್ ಅವರಿಗೆ ಯೆನೆಪೋಯ ವಿಶ್ವವಿದ್ಯಾಲಯ ಇಂದು ಗೌರರ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಶೈಕ್ಷಣಿಕ-ಸಾಮಾಜಿಕ ಹಾಗೂ ಸೇವಾ ಕ್ಷೇತ್ರಗಳಲ್ಲಿ ದೇಶ ಹಾಗೂ ವಿದೇಶಗಳಲ್ಲಿ ಕಳೆದ 60 ವರ್ಷಗಳಿಂದ ನಡೆಸಿರುವ ಗಣನೀಯ ಸೇವೆಗಳನ್ನು ಪರಿಗಣಿಸಿ ಯೆನೆಪೋಯ ವಿವಿಯು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.

ಮಂಗಳೂರಿನ ದೇರಳಕಟ್ಟೆ ಯೇನೆಪೋಯ ವಿವಿ ಕ್ಯಾಂಪಸಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯೆನೆಪೋಯ ವಿವಿ ಕುಲಪತಿ ಡಾ. ಯೇನೆಪೋಯ ಅಬ್ದುಲ್ಲ ಕುಞ್ಞಿ ಅವರು ಗೌರವ ಡಾಕ್ಟರೇಟ್ ಸನ್ಮಾನಿಸಿದರು.

ಪದವಿ ಸನ್ಮಾನಿಸಿದ ಬಳಿಕ ಮಾತನಾಡಿದ ಯೇನೆಪೋಯ ವಿವಿ ಕುಲಪತಿ ಯೇನೆಪೋಯ ಅಬ್ದುಲ್ಲ ಕುಞ್ಞಿ ಅವರು “ಭಾರತದ ಗ್ರಾಂಡ್ ಮುಫ್ತಿಯಾಗಿ, ಅಖಿಲ ಭಾರತ ಜಂಇಯ್ಯತುಲ್ ಉಲಮಾ ನಾಯಕರಾಗಿ, ಸಾವಿರಾರು ಜನರ ಮಧ್ಯೆ ಸ್ವಾಧೀನ ಹೊಂದಿದ್ದು, ಶಿಕ್ಷಣ, ಸಾಮಜ ಸೇವೆ, ಐಕ್ಯತೆ ಹಾಗೂ ಅನಾಥ, ನಿರ್ಗತಿಕರ ಸೇವೆ ಮುಂತಾದ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸಿರುವ ಕಾಂತಪುರಂ ಶೇಖ್ ಅಬೂಬಕರ್ ಅಹ್ಮದ್ ಅವರನ್ನು ಯೇನೆಪೋಯ ವಿವಿಯು ಗೌರವಯುತವಾಗಿ ಕಾಣುತ್ತದೆ. ಶೈಕ್ಷಣಿಕ ರಂಗದಲ್ಲಿ ಕಾಂತಪುರಂ ಅವರು ನಡೆಸಿರುವ ಕ್ರಾಂತಿ ಅದ್ಬುತವಾಗಿದೆ. ಸರ್ವ ಮಕ್ಕಳಿಗೂ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲೂ, ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವಲ್ಲೂ ಕಾಂತಪುರಂ ಅವರ ಸೇವೆ ಗಣನೀಯವಾಗಿದೆ.” ಎಂದು ಅಭಿಪ್ರಾಯಪಟ್ಟರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಂತಪುರಂ ಶೇಖ್ ಅಬೂಬಕರ್ ಅಹ್ಮದ್ “ದೈವಾನುಗ್ರಹದಿಂದ ವರ್ಷಗಳ ಕಾಲ ಸಮಾಜ ಸೇವೆ ನಡೆಸಲು ಸಾಧ್ಯವಾಗಿದೆ. ಇದೀಗ ಅಲ್ಲಾಹನು ನೀಡಿರುವುದನ್ನು ಸ್ವೀಕರಿಸುವುದು ಎಂಬ ನಿಲೆಯಲ್ಲಿ ಈ ಡಾಕ್ಟರೆಟ್ ಪದವಿ ಸ್ವೀಕರಿಸಿದ್ದೇನೆ. ಮುಸ್ಲಿಮರು ಬರೀ ಧಾರ್ಮಿಕ ವಿಧ್ಯಬ್ಯಾಸ ಇದ್ದರೆ ಮಾತ್ರ ಸಾಲದು, ಲೌಕಿಕ ವಿದ್ಯಭ್ಯಾಸಕ್ಕೂ ಪ್ರಾಶಸ್ತ್ಯ ನೀಡಬೇಕು. ಆ ನಿಟ್ಟಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಅಧಿಕಗೊಳಿಸಬೇಕು. ಗೌರವ ಪದವಿ ನೀಡಿದ ಯೇನೆಪೋಯ ವಿಶ್ವವಿದ್ಯಾಲಯವು ಕೂಡಾ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡುತ್ತಿದೆ. ಯೆನೆಪೋಯ ವಿವಿಯು ಮರ್ಕಝ್ ಸಂಸ್ಥೆಯಿಂದ ಬಂದಿರುವ ಹಲವಾರು ಅನಾಥ ಮಕ್ಕಳಿಗೆ ವೈದ್ಯಕೀಯ ಶಿಕ್ಷಣವನ್ನು ಒದಗಿಸಿದೆ. ಮುಂದಿನ ದಿನಗಳಲ್ಲೂ ಅನಾಥ ನಿರ್ಗತಿಕರಿಗೆ ಉಚಿತ ಶಿಕ್ಷಣವನ್ನು ನೀಡಲು ಸಾಧ್ಯವಾಗಲಿ.” ಎಂದು ಹೇಳಿದರು.

ಯೆನೆಪೋಯ ವಿವಿಯ 16ನೇ ಘಟಿಕೋತ್ಸವದ ಭಾಗವಾಗಿ ಯೆನ್‌ಡುರೆನ್ಸ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಯೇನೆಪೋಯ ವಿವಿ ಕುಲಪತಿ ಡಾ. ಕೆ.ಎಸ್ ಗಂಗಾಧರ ಸೋಮಯಾಜಿ, ಕುಲಸಚಿವ ಡಾ. ಅಶ್ವಿನಿ ದತ್, ಸಹಕುಲಪತಿಗಳಾದ ಡಾ. ವಿಜಯಕುಮಾರ್, ಡಾ. ಮುಹಮ್ಮದ್ ಫರ್ಹಾದ್, ಯೇನೆಪೋಯ ಕುಲಸಚಿವ – ಪರೀಕ್ಷಾಂಗ ಡಾ. ಬಿಟಿ ನಂದೀಶ್, ಇಸ್ಲಾಮಿಕ್ ಅಕಾಡೆಮಿ ಆಫ್ ಎಜ್ಯುಕೇಶನ್ ಟ್ರಸ್ಟೀ ಡಾ. ಹಬೀಬ್ ರಹ್ಮಾನ್ , ಜಾಮಿಅ ಮರ್ಕಝ್ ಕುಲಪತಿ ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್ ಸೇರಿದಂತೆ ಹಲವಾರು ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ನಾಯಕರು ಉಪಸ್ಥಿತರಿದ್ದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed