×

ಖುದ್ದಾಮುಲ್ ಮಸೀದಿ ವತಿಯಿಂದ ಯೆನೆಪೋಯ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ಖುದ್ದಾಮುಲ್ ಮಸೀದಿ ವತಿಯಿಂದ ಮತ್ತು ಯೆನೆಪೋಯ ಆಸ್ಪತ್ರೆಯ ಸಹಯೋಗದೊಂದಿಗೆ ಅಕ್ಟೋಬರ್ 25 -2026 ರಂದು ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಅಗತ್ಯ ಆರೋಗ್ಯ ಸಲಹೆಗಳನ್ನು ನೀಡಲಾಯಿತು.

ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಮತ್ತು ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು ಶಿಬಿರದಲ್ಲಿ ಸುಮಾರು 153 ಮಂದಿ ಭಾಗವಹಿಸಿ ಇದರ ಪ್ರಯೋಜನ ಪಡೆದು ಕೊಂಡರು.

ಸಮಾಜದ ಆರೋಗ್ಯ ಮತ್ತು ‌ಕಲ್ಯಾಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಖುದ್ದಾಮುಲ್ ಇಸ್ಲಾಂ ಮಸೀದಿ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ‌ ಸ್ಪಂದನೆ ವ್ಯಕ್ತವಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷರಾದ T.A ಶಾನವಾಝ್ ವಹಿಸಿಕೊಂಡರು. ಯೆನೆಪೋಯ ಆಸ್ಪತ್ರೆಯ ಕ್ಯಾಂಪ್ ಕೋರ್ಡಿನೇಟರ್ ರಜಾಕ್, ವೈಧ್ಯರಾದ ಡಾI ಅಪೂರ್ವ, ಡಾI ನಿಶಾಂತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಸಂತ ಅಂತೋನಿ ಚರ್ಚ್ ನ ಉಪಾಧ್ಯಕ್ಷರಾದ ವಿನಯ್ ರಾಜತ್,ನಾರಾಯಣ ಗುರು ಮಂದಿರದ ಕಾರ್ಯದರ್ಶಿ ಉಮೇಶ್ ಮಲರಾಯ ಸ್ಥಾನ,KMJM ಖತೀಬರಾದ ಅಬ್ದುಲ್ ರಹೀಂ ಸಖಾಫಿ ಅಲ್ ಅಝ್ಹರಿ,ಕಾವೂರು ಪೋಲಿಸ್ ಠಾಣಾಧಿಕಾರಿ ಮಲ್ಲಿಕಾರ್ಜುನ, ಗೋಲ್ಡ್ ಪಿಂಚ್ ವ್ಯವಸ್ಥಾಪಕರಾದ ಪ್ರಸಾದ್ ಶೆಟ್ಟಿ, ಮಡೇರ ಫೌಂಡೇಶನ್ ಸತೀಶ್ ಆಳ್ವ, ಖುದ್ದಾಮುಲ್ ಇಸ್ಲಾಂ ಮಸೀದಿ ಇಮಾಂ ಉಮರುಲ್ ಫಾರೂಖ್ ಹಿಮಮಿ ಅಸ್ಸಖಾಫಿ, KMJM ಅಧ್ಯಕ್ಷರಾದ ಅಬ್ಬಾಸ್ ಹಾಜಿ, ಆರ್ಮಿ‌ ಆಫೀಸರ್ ಜನಾರ್ದನ ಕರ್ಕೇರ, ಸ್ಥಳೀಯರಾದ ಶೇಖುಂಞಿ ಹಾಜಿ ಉಪಸ್ಥಿತರಿದ್ದರು. ಖುದ್ದಾಮುಲ್ ಇಸ್ಲಾಂ ಕಾರ್ಯದರ್ಶಿ ರಫೀಕ್ ಕೂಳೂರು ಕಾರ್ಯಕ್ರಮ ನಿರೂಪಿಸಿದರು

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed