ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ನೌಕರರ ಸೇವಾ ವ್ಯವಸ್ಥೆಯನ್ನು ಇನ್ನಷ್ಟು ಸುಗಮ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ‘ಸಾರಿಗೆ ಮಿತ್ರ’ HRMS ಮೊಬೈಲ್ ಆಪ್‌ನ ನವೀಕೃತ ಆವೃತ್ತಿ 2.0.0 ಅನ್ನು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಇಂದು ಬಿಡುಗಡೆಗೊಳಿಸಿದರು.
ಡಿಜಿಟಲ್ ಪರಿವರ್ತನೆಯ ಭಾಗವಾಗಿ ರೂಪುಗೊಂಡಿರುವ ಈ ಆಪ್‌ನ್ನು ನೌಕರರ ಕಲ್ಯಾಣಕ್ಕೆ ವಿಶೇಷ ಗಮನ ನೀಡಿ, ಹೊಸ ವರ್ಷದ ಸಾರ್ಥಕ ಆರಂಭವಾಗಿ ಪರಿಚಯಿಸಲಾಗಿದೆ.

ಸ್ಮಾರ್ಟ್‌ಫೋನ್ ಮೂಲಕವೇ ಮಾನವ ಸಂಪನ್ಮೂಲ ಸೇವೆಗಳು ತ್ವರಿತವಾಗಿ ಲಭ್ಯವಾಗುವಂತೆ ಆಪ್ ಅಭಿವೃದ್ಧಿಪಡಿಸಲಾಗಿದೆ.
ಆಪ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಜಿಯೋ–ಫೆನ್ಸಿಂಗ್ ಆಧಾರಿತ ಹಾಜರಾತಿ ವ್ಯವಸ್ಥೆ, ಮಾಸಿಕ ಹಾಜರಾತಿ ವೀಕ್ಷಣೆ, ವೈಯಕ್ತಿಕ ಹಾಗೂ ಸೇವಾ ದಾಖಲಾತಿ ವಿವರಗಳು, ಕುಟುಂಬ ಸದಸ್ಯರು ಮತ್ತು ನಾಮನಿರ್ದೇಶಿತ ಮಾಹಿತಿ ವೀಕ್ಷಣೆ, ಮಾಸಿಕ ವೇತನಪಟ್ಟಿ (ಪೇ ಸ್ಲಿಪ್) ಡೌನ್‌ಲೋಡ್, ರಜೆ ನಿರ್ವಹಣಾ ವ್ಯವಸ್ಥೆ ಮೂಲಕ ರಜೆ ವಿವರಗಳ ಪರಿಶೀಲನೆ ಹಾಗೂ ನಿಗಮದ ವಿವಿಧ ವಿಭಾಗಗಳಿಂದ ಹೊರಡಿಸುವ ಸುತ್ತೋಲೆಗಳ ಮಾಹಿತಿ ಲಭ್ಯತೆ ಸೇರಿವೆ.
ಈ ಆಪ್ ಮೂಲಕ ನೌಕರರಿಗೆ ಬೆರಳಂಚಿನಲ್ಲೇ ಸಮಗ್ರ ಮಾಹಿತಿ ದೊರೆಯಲಿದ್ದು, ಆಂತರಿಕ ಸಂವಹನ ವ್ಯವಸ್ಥೆಯೂ ಮತ್ತಷ್ಟು ಬಲಪಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಷ ಭಾಆಸೇ, ನಿರ್ದೇಶಕರು (ಸಿ&ಪಿ) ಡಾ. ನಂದಿನಿ ದೇವಿ ಭಾಆಸೇ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



Post Comment