ಸಾರಿಗೆ ಇಲಾಖೆಯ ಇತಿಹಾಸದಲ್ಲೇ ದೊಡ್ಡ ನೇಮಕಾತಿ; ಕನ್ನಡಿಗರಿಗೆ ಉದ್ಯೋಗದ ಆತ್ಮಸ್ಥೈರ್ಯ
ಬೆಂಗಳೂರು: ಕರ್ನಾಟಕ ಸಾರಿಗೆ ಸಂಸ್ಥೆಗಳಲ್ಲಿ ಕಳೆದ ಎರಡು ವರ್ಷದಲ್ಲಿ ಅಪಾರ ಉದ್ಯೋಗಾವಕಾಶಗಳು ನಿರ್ಮಾಣವಾಗಿ, ಒಟ್ಟು 9989 ನೇಮಕಾತಿಗಳು ಯಶಸ್ವಿಯಾಗಿ ನಡೆದಿದೆ. ಇದು ಸಾಮಾನ್ಯ ಸಂಗತಿಯಾಗಿರಲಿಲ್ಲ—ವಿವಾದವಿಲ್ಲದೆ, ಭ್ರಷ್ಟಾಚಾರವಿಲ್ಲದೆ, ಸಂಪೂರ್ಣ ಪಾರದರ್ಶಕತೆಯೊಂದಿಗೆ ಪೂರ್ಣಗೊಂಡ ಅಪರೂಪದ ಸರ್ಕಾರಿ ಪ್ರಕ್ರಿಯೆ. ಈ ಸಾಧನೆಯ ಹಿಂದಿನ ಮುಖ್ಯ ಬಲವೆಂದರೆ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ.
ವಾಯವ್ಯ ಸಾರಿಗೆ ಸಂಸ್ಥೆ: 1000 ಚಾಲನಾ ಹುದ್ದೆಗಳಿಗೆ ಹಸಿರು ನಿಶಾನೆ
ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು, 1000 ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಅಧಿಕೃತ ಆದೇಶವೂ ಹೊರಬಿದ್ದಿದೆ. ವರ್ಷಗಳ ಕಾಲ ಕಾಯುತ್ತಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಜೀವನಕ್ಕೆ ಆಸರೆಯಾಗಿದೆ.
ಅಭ್ಯರ್ಥಿಗಳು ಹುದ್ದೆಗಳಿಲ್ಲದೆ ವಯೋಮಿತಿ ಮೀರಿದ ಸ್ಥಿತಿಗೆ ತಲುಪಿದರು. ಸರ್ಕಾರ ಬದಲಾದರೂ ಅವರ ಹೋರಾಟ ಮುಂದುವರಿದೇ ಇತ್ತು.
ಕಾಂಗ್ರೆಸ್ ಸರ್ಕಾರದ ಭಿಗಿ ನಿರ್ಧಾರ; ಅಭ್ಯರ್ಥಿಗಳಿಗೆ ನಿಶ್ಶಬ್ದ ಭರವಸೆ:
2024 ಮಾರ್ಚ್ 1ರಂದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನೇಮಕಾತಿ ಪ್ರಕ್ರಿಯೆಗೆ ಅಧಿಕೃತ ಅನುಮೋದನೆ ನೀಡಿ, ವರ್ಷಗಳಿಂದ ಬೀಗಿಹಾಕಿದ್ದ ಬಾಗಿಲುಗಳನ್ನು ತೆರೆದರು.
ಎರಡೂವರೆ ವರ್ಷಗಳಲ್ಲಿ 10,000 ಹುದ್ದೆಗಳ ನೇಮಕಾತಿ – ಇದು ಸಾಮಾನ್ಯ ಸಾಧನೆಯಲ್ಲ. ಅದೂ ಒಂದೇ ಒಂದು ವಿವಾದವಿಲ್ಲದೆ, ಭ್ರಷ್ಟಾಚಾರ-ರಹಿತ, ಪಾರದರ್ಶಕ ಪ್ರಕ್ರಿಯೆಯಲ್ಲಿ ನಡೆದ ನೇಮಕಾತಿಗಳು. ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ ಇತ್ತೀಚೆಗೆ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.
ಹಿನ್ನೆಲೆ: ಬಿಜೆಪಿ ಆಡಳಿತದಲ್ಲಿ ನೇಮಕಾತಿ ತಡೆ:
ಕೋವಿಡ್-19 ಸಮಯದಲ್ಲಿ ಬಿಜೆಪಿ ಸರ್ಕಾರದ ಆದೇಶ ಸಂಖ್ಯೆ ಆಇ03 ಬಿಇಎಂ 2020 ರನ್ವಯ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ತಡೆಹಿಡಿದಿತ್ತು. ವಾಯವ್ಯ ಸಾರಿಗೆ ಸಂಸ್ಥೆಯವರು ನಿರಂತರವಾಗಿ 2023 ರವರೆಗೆ 2 ವರ್ಷ 8 ತಿಂಗಳ ಕಾಲ ಮನವಿ ಸಲ್ಲಿಸಿದರೂ ಅನುಮತಿ ನೀಡಿರಲಿಲ್ಲ.
ದಿನಾಂಕ 1.03.2024 ರಂದು, ಕಾಂಗ್ರೆಸ್ ಸರ್ಕಾರವು ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗೆ ಅನುಮೋದನೆ ನೀಡಿತು. ಇತ್ತೀಚೆಗೆ, ಸಚಿವ ಸಂಪುಟ ಸಭೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1,000 ಚಾಲನಾ ಸಿಬ್ಬಂದಿ ಹುದ್ದೆಗಳ ನೇಮಕಾತಿಗೆ ಅನುಮೋದನೆ ಪಡೆಯಲಾಗಿದೆ.
ಇಲ್ಲಿಯವರೆಗಿನ ಸಾಧನೆಗಳು:
· ಕೆಎಸ್ಆರ್ಟಿಸಿ: 2,800 ನೇಮಕಾತಿಗಳು
· ಬಿಎಂಟಿಸಿ: 2,828 ನೇಮಕಾತಿಗಳು
· ವಾಯವ್ಯ ರಸ್ತೆ ಸಾರಿಗೆ: 2,261 ನೇಮಕಾತಿಗಳು
· ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ: 2,900 ನೇಮಕಾತಿಗಳು
· ಒಟ್ಟು: 9,989 ನೇಮಕಾತಿಗಳು (1,000 ಹೊಸ ಹುದ್ದೆಗಳೊಂದಿಗೆ 10,989 ಕ್ಕೆ ಏರಲಿದೆ)
ಸಚಿವ ರಾಮಲಿಂಗಾ ರೆಡ್ಡಿ ಅವರ ಸಕ್ರಿಯ ಸ್ಪಂದನೆ:
ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ನೇಮಕಾತಿ ಪ್ರಕ್ರಿಯೆಯಲ್ಲಿ ತೀವ್ರ ಆಸಕ್ತಿ ವಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಅಭ್ಯರ್ಥಿಗಳ ಪ್ರತಿಭಟನೆಯ ಸಮಯದಲ್ಲಿ, ಅವರು ವ್ಯಕ್ತಿಯಾಗಿ ಭೇಟಿ ನೀಡಿ, “ನಿಮ್ಮ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಮತ್ತು ಮುಂದಿನ ಬೆಳಗಾವಿ ಅಧಿವೇಶನಕ್ಕೂ ಮುಂಚೆಯೇ ಸಂತೋಷದ ಸುದ್ದಿ ನೀಡಲಾಗುವುದು” ಎಂದು ಭರವಸೆ ನೀಡಿದ್ದರು.
ಆಸಕ್ತಿದಾಯಕ ಸಂಗತಿ: ಬಿಜೆಪಿ ನಾಯಕರ ನಂಬಿಕೆ:
ಹುಬ್ಬಳ್ಳಿಯ ಪ್ರತಿಭಟನೆಯ ಸಮಯದಲ್ಲಿ, ಬಿಜೆಪಿ ನಾಯಕರು ಬೊಮ್ಮಾಯಿ ಮತ್ತು ಪ್ರಹ್ಲಾದ್ ಜೋಷಿ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ತಡೆಹಿಡಿದಿದ್ದ ನೇಮಕಾತಿಯನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನುಮತಿ ನೀಡಿಸುವ ಬಗ್ಗೆ ಭರವಸೆ ಕೊಟ್ಟಿದ್ದರು. ಇದು ಬಿಜೆಪಿ ನಾಯಕರಿಗೆ ತಮ್ಮ ಸರ್ಕಾರಕ್ಕಿಂತ ರಾಮಲಿಂಗ ರೆಡ್ಡಿ ಅವರ ಮೇಲೆ ಹೆಚ್ಚಿನ ನಂಬಿಕೆ ಇದೆ ಎಂಬ ಅಂಶವನ್ನು ಪ್ರಕಟಿಸುತ್ತದೆ.
ವಿಶೇಷ ಮಾರ್ಪಾಡು;
2019ರ ಅಧಿಸೂಚನೆಯು ಕೇವಲ ಚಾಲಕರ ಹುದ್ದೆಗೆ ಮಾತ್ರ ಇತ್ತು. ಆದರೆ ರಾಮಲಿಂಗ ರೆಡ್ಡಿ ಅವರ ನೇತೃತ್ವದಲ್ಲಿ, ವಾಯವ್ಯ ಸಾರಿಗೆ ಸಂಸ್ಥೆಯ ಮನವಿಯನ್ನು ಪರಿಗಣಿಸಿ, ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯಲ್ಲಿ ಮಾರ್ಪಾಡು ಮಾಡಿ 1,000 ನಿರ್ವಾಹಕ ಹುದ್ದೆಗಳಿಗೆ ಅನುಮತಿ ನೀಡಲಾಗಿದೆ.
ತೀರ್ಮಾನ:
ಟ್ವೀಟ್ ಮಾಡುವುದರಲ್ಲಿ ಬದ್ಧತೆಯಲ್ಲ, ಜನಸೇವೆಯಲ್ಲಿ ಬದ್ಧತೆ ತೋರಿಸಿ ಸಾಧಿಸಿರುವ ರಾಮಲಿಂಗ ರೆಡ್ಡಿ ಅವರ ಕಾರ್ಯವೈಖರಿ ನಿಜವಾಗಿಯೂ ಪ್ರಶಂಸನೀಯವಾಗಿದೆ. ಯುವಕರ ಭವಿಷ್ಯ ಗಂಡಾಂತರಕ್ಕೆ ಒಳಗಾಗಿದ್ದ ಸನ್ನಿವೇಶದಲ್ಲಿ, ಅವರ ನೇತೃತ್ವದ ಸಾರಿಗೆ ಇಲಾಖೆ ನ್ಯಾಯ ಮತ್ತು ಸಮಯಸ್ಫೂರ್ತಿ ತೋರಿದೆ.
ಸಚಿವ ರಾಮಲಿಂಗ ರೆಡ್ಡಿ ಅವರ ಕಾರ್ಯನೀತಿ ಮತ್ತು ಸಾಧನೆಗಳಿಗೆ ನಮ್ಮದೊಂದು “Hatsoff”!
ವಿಶೇಷ ವರದಿ: ಹಂಝ ಕಿನ್ಯಾ



Post Comment