ಬೆಂಗಳೂರು:
ಕರ್ನಾಟಕದ ಶತಮಾನಗಳಷ್ಟು ಹಳೆಯದಾದ ಮರದ ಗೊಂಬೆಯಾಟ ಸಂಪ್ರದಾಯವು ಜಾಗತಿಕ ಮಟ್ಟದಲ್ಲಿ ದೊಡ್ಡ ಸಾಮರ್ಥ್ಯ ಹೊಂದಿದ್ದು, ಅದನ್ನು ಆರ್ಥಿಕ ಬೆಳವಣಿಗೆಯ ಮೂಲವನ್ನಾಗಿಸಲು ಸಾಧ್ಯವಿದೆ ಎಂದು ಧಾತು ಗೊಂಬೆಯಾಟ ರಂಗಮಂದಿರದ ಸಂಸ್ಥಾಪಕಿ ಮತ್ತು ಪದ್ಮಶ್ರೀ ಪುರಸ್ಕೃತೆ ಅನುಪಮಾ ಹೊಸಕೆರೆ ಅಭಿಪ್ರಾಯ ಪಟ್ಟರು.
ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟ (FKCCI) ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪ್ಯಾರಿಸ್ಿನಿಂದ ರಷ್ಯಾವರೆಗೆ, ಝೆಕ್ ಗಣರಾಜ್ಯದಿಂದ ಮೊರಾಕೊವರೆಗೆ, ಎಲ್ಲೆಡೆ ಕರ್ನಾಟಕದ ಗೊಂಬೆಯಾಟ ಸಂಪ್ರದಾಯಕ್ಕೆ ಅಪಾರ ಆಸಕ್ತಿ ಇದೆ. ಅನೇಕರು ಭಾರತವನ್ನು, ವಿಶೇಷವಾಗಿ ಕರ್ನಾಟಕವನ್ನು ಬೊಂಬೆಯಾಟದ ತಾಯ್ನಾಡು ಎಂದು ಕರೆಯುತ್ತಾರೆ,” ಎಂದು ಹೇಳಿದರು.
ಕರ್ನಾಟಕವು ವಿಶ್ವದಲ್ಲೇ ಅತಿ ದೊಡ್ಡ ಮರದ ಗೊಂಬೆಗಳನ್ನು ತಯಾರಿಸುವ ರಾಜ್ಯವಾದರೂ, ಈ ಕಲೆಯನ್ನು ಆರ್ಥಿಕಶಕ್ತಿಯಾಗಿ ರೂಪಿಸುವ ಹೆಜ್ಜೆಗಳು ಇನ್ನೂ ಅಪೂರ್ಣವಾಗಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
“ನಮ್ಮ ಬಳಿ ಜೀವಂತ, ಕ್ರಿಯಾತ್ಮಕ, ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುವ ಕಲೆ ಇದೆ. ಆದರೆ ತರಬೇತಿ, ದಾಖಲೀಕರಣ, ಡಿಜಿಟಲ್ ವೇದಿಕೆಗಳು, ಪ್ರವಾಸೋದ್ಯಮ ಹಾಗೂ ಉತ್ಪನ್ನ ಅಭಿವೃದ್ಧಿ ಕ್ಷೇತ್ರಗಳಲ್ಲಿ ಇನ್ನಷ್ಟು ಹೂಡಿಕೆ ಅಗತ್ಯವಿದೆ,” ಎಂದರು.
ಬಾಲಿ ದೇಶದಲ್ಲಿ ಕಥೆ ಹೇಳುವಿಕೆಯ ಸುತ್ತಲೇ ಸಂಪೂರ್ಣ ಆರ್ಥಿಕತೆ ಬೆಳೆದ ಉದಾಹರಣೆಯನ್ನು ನೀಡಿದ ಅವರು, “ಕರಕೌಶಲ್ಯ ಮತ್ತು ಸಂಪ್ರದಾಯಗಳಲ್ಲಿ ಶ್ರೀಮಂತವಾದ ಕರ್ನಾಟಕದಲ್ಲಿ ಸಾಧ್ಯತೆ ಇನ್ನೂ ದೊಡ್ಡದು,” ಎಂದು ಅಭಿಪ್ರಾಯಿಸಿದರು.
“ಸರಿಯಾದ ಬೆಂಬಲ ದೊರೆತರೆ, ಮರದ ಗೊಂಬೆಯಾಟ ಕರ್ನಾಟಕದ ಸೃಜನಶೀಲ ಉದ್ಯಮದ ಶಕ್ತಿ ಕೇಂದ್ರವಾಗಬಹುದು. ಇದು ಕುಶಲಕರ್ಮಿಗಳಿಗೆ ಉದ್ಯೋಗ, ಗ್ರಾಮೀಣ ಪ್ರದೇಶಗಳಿಗೆ ಸಬಲೀಕರಣ ಮತ್ತು ಕರ್ನಾಟಕದ ಸಾಂಸ್ಕೃತಿಕ ನಾಯಕತ್ವಕ್ಕೆ ಜಾಗತಿಕ ಗೌರವ ತಂದುಕೊಡುತ್ತದೆ,” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಯಾಲಿಕ್ಸ್ ಸಂಸ್ಥಾಪಕಿ ರೇವತಿ ಕಾಮತ್, ಜಪಾನ್ನ ಜೆಐಡಬ್ಲ್ಯುಎಫ್ ಸಂಸ್ಥಾಪಕಿ ತಮಿಕೊ ಓಬಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. FKCCI ಅಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್, ಉಪಾಧ್ಯಕ್ಷ ಬಿ.ಪಿ. ಶಶಿಧರ್ ಹಾಗೂ ನಿಕಟಪೂರ್ವ ಅಧ್ಯಕ್ಷ ಎಂ.



Post Comment