ಗುರುಗ್ರಾಮ್ (ಹರಿಯಾಣ), ನವೆಂಬರ್ 9, 2025: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮೈಸೂರು ನಗರ ಸಾರಿಗೆಯ ‘ಧ್ವನಿಸ್ಪಂದನ’ ಯೋಜನೆಗೆ ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದಿಂದ Award of Excellence in Urban Transport – 2025 ಎಂಬ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
“THE STATE, WHICH HAS IMPLEMENTED BEST URBAN TRANSPORT PROJECTS DURING THE PREVIOUS YEAR” ಎನ್ನುವ ವರ್ಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.
ಮೈಸೂರು ನಗರ ಸಾರಿಗೆಯ 200 ನಗರ ಬಸ್‌ಗಳಲ್ಲಿ ಜಾರಿಗೊಂಡಿರುವ ‘ಧ್ವನಿ ಸ್ಪಂದನ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್’ ದೇಶದಲ್ಲೇ ಮೊದಲ ಪ್ರಯೋಗವಾಗಿದ್ದು, ಇದು ದೃಷ್ಟಿ ವಿಕಲ ಚೇತನಗಳು ಬಸ್‌ಗಳನ್ನು ಗುರುತಿಸುವುದು, ಹತ್ತುವುದು ಮತ್ತು ಪ್ರಯಾಣಿಸುವುದು ಸುಲಭವಾಗುವಂತೆ ಧ್ವನಿಯ ಮೂಲಕ ಮಾರ್ಗದರ್ಶನ ನೀಡುವ ತಂತ್ರಜ್ಞಾನವಾಗಿದೆ.
ಈ ಯೋಜನೆಯನ್ನು ಐಐಟಿ ದೆಹಲಿಯ Rised Lines Foundation ಅಭಿವೃದ್ಧಿಪಡಿಸಿದ್ದು, ಜರ್ಮನಿಯ GEZ ಸಂಸ್ಥೆಯ ಸಹಯೋಗದಲ್ಲಿ ಜಾರಿಗೊಂಡಿದೆ. ಇದುವರೆಗೆ 400 ಕ್ಕೂ ಹೆಚ್ಚು ದೃಷ್ಟಿ ವಿಕಲ ಚೇತನ ಪ್ರಯಾಣಿಕರಿಗೆ ಬಳಕೆಯ ಕುರಿತು ತರಬೇತಿಯನ್ನು ನೀಡಲಾಗಿದೆ.
ಈ ಯೋಜನೆ ದೃಷ್ಟಿ ವಿಕಲರ ಆತ್ಮವಿಶ್ವಾಸ, ಭದ್ರತೆ ಮತ್ತು ಸ್ವತಂತ್ರ ಸಂಚಾರ ಸಾಮರ್ಥ್ಯವನ್ನು ಹೆಚ್ಚಿಸಿರುವುದನ್ನು ಪ್ರಶಸ್ತಿ ಸಮಿತಿ ಪ್ರಶಂಸಿಸಿದೆ.
ಪ್ರಶಸ್ತಿಯನ್ನು ಮಾನ್ಯ ಸಚಿವರು ಮನೋಹರ್ ಲಾಲ್ ಮತ್ತು ಮಾನ್ಯ ರಾಜ್ಯ ಸಚಿವರು ತೋಕನ್ ಸಾಹು ಅವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಭಾ.ಆ.ಸೇ ಅವರಿಗೆ ಪ್ರದಾನ ಮಾಡಿದರು.
ಸರ್ಕಾರ – ವಿದ್ಯಾಸಂಸ್ಥೆಗಳು – ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜಾರಿಗೊಂಡಿರುವ ಈ ಯೋಜನೆ ದೇಶದ ಮಟ್ಟದಲ್ಲಿ ಮಾದರಿ ಉಪಕ್ರಮವೆಂದು ಪ್ರಶಂಸಿಸಲಾಗಿದೆ.



Post Comment