ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್.ಐ.ಆರ್. ದಾಖಲಿಸಲು ಪಾಣಾರ ಯಾನೆ ನಲಿಕೆ ಸಮಾಜಸೇವಾ ಸಂಘ ಮನವಿ
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನೇಮ ಕಟ್ಟುವ ಸಮುದಾಯದ ವಿರುದ್ಧ ತಪ್ಪು ಸಂದೇಶ- ಅಶ್ಲೀಲ ನಿಂದಿನೆ ವಿರುದ್ಧ ದಲಿತ ದೌರ್ಜನ್ಯ ತಡೆ
ಕಾಯ್ದೆಯಡಿ ಎಫ್.ಐ.ಆರ್. ದಾಖಲಿಸುವಂತೆ ದ.ಕ ಜಿಲ್ಲಾಧಿಕಾರಿ,ಮಂಗಳೂರು ಪೊಲೀಸ್ ಆಯುಕ್ತರಿಗೆ ಮಂಗಳೂರು ಪಾಣಾರ ಯಾನೆ ನಲಿಕೆ ಸಮಾಜಸೇವಾ ಸಂಘ (ರಿ.)ನಲಿಕೆ ಸಮುದಾಯದ ಪರವಾಗಿ
ಮೂಡುಶೆಡ್ಡೆ, ಮಂಗಳೂರು
ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ (ರಿ) ವಾಮಂಜೂರು, ಮೂಡುಶೆಡ್ಡೆ ಮನವಿ ಮಾಡಿದ್ದಾರೆ.

ಇತ್ತೀಚಿಗೆ ತುಳು ನಾಡಿನಲ್ಲಿರುವ ಶತ ಶತಮಾನ ಕಾಲದಿಂದಲೂ
ದೈವಾರಾಧನೆಯನ್ನು ಪರಿಶಿಷ್ಠ ಜಾತಿಯ ನಲಿಕೆ, ಪಂಬದ, ಪರಮ ಸಮುದಾಯಗಳು ಸಂಪ್ರಾದಾಯ ಬದ್ಧವಾಗಿ ಆರಾಧಾನಾ ಪರಂಪರೆಯಾಗಿ ಸಾಂಪ್ರಾದಾಯಿಕ ಚೌಕಟ್ಟಿನೊಳಗೆ ನೇಮದ ಸೇವೆಯನ್ನು ಮಾಡಿಕೊಂಡು ಬರುತ್ತಾ ಇದ್ದು, ಅದನ್ನು ಯಾವುದೇ ಕಾರಣಕ್ಕೂ ಯಕ್ಷಗಾನ, ರಂಗಭೂಮಿ, ಚಲನಚಿತ್ರ, ಸಾರ್ವಜನಿಕ ಮೆರವಣಿಗೆ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಕೂಡದೆಂದು ಈ ಹಿಂದಿನ ಜಿಲ್ಲಾಧಿಕಾರಿಯವರಿಗೆ ಕೊಟ್ಟ ಮನವಿಯ ಆಧಾರದ ಮೇಲೆ ಆದೇಶಿಸಿರುತ್ತಾರೆ. ಆದರೆ ಪ್ರಸ್ತುತ ಎಲ್ಲಾ ರಂಗಗಳಲ್ಲಿ ಪ್ರದರ್ಶಿಸುತ್ತಿದ್ದು, ಮಾತ್ರವಲ್ಲದೆ ನಮ್ಮ ಶೋಷಿತ ಸಮುದಾಯದ ಮೇಲೆ ಸಾಮಾಜಿಕ ಜಾಲ ತಾಣದಲ್ಲಿ ಅಶ್ಲೀಲವಾಗಿ ನಿಂದನಾ ಬರಹವನ್ನು ಬರೆದಿದ್ದಾರೆ. ಅದಲ್ಲದೆ ‘ಕಲ್ಜಿಗ’ ಎಂಬ ತುಳು ಸಿನೇಮಾ ತಂಡದವರು ಕೊರಗಜ್ಜನ ಪಾತ್ರವನ್ನು ರಕ್ಷಿತ್ ಜೋಗಿಯವರಲ್ಲಿ ಮಾಡಿಸಿ ಸುದ್ದಿಗೋಷ್ಠಿಯಲ್ಲಿ ನಲಿಕೆ
ಸಮುದಾಯದವರೇ ಕೊರಗಜ್ಜನ ಪಾತ್ರವನ್ನು ಮಾಡಿದರೆಂದು ಸುಳ್ಳು ಸುದ್ದಿ ಹರಡಿಸಿ ನಮ್ಮ ಜಾತಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದಿನಾಂಕ 17-09-2024ರಂದು ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯು ಬೊಂಬಾಟ್ ಸಿನೇಮಾ ಎಂಬ ಯೂಟ್ಯೂಬ್
ಚಾನೆಲ್‌ನಲ್ಲಿ ಪ್ರಸಾರವಾಗಿದ್ದು ಈ ವಿಡಿಯೋಗೆ @nishanth Poojary-Uq ಎಂಬ ಹೆಸರಿನಲ್ಲಿ ಕಮೆಂಟ್ ಮಾಡಿ ದೈವ ನರ್ತಕರನ್ನು ಕೆಟ್ಟಪದಗಳಿಂದ ನಿಂದಿಸಿದ್ದಲ್ಲದೆ ದೈವ ನರ್ತಕ ಸಮುದಾಯದ ವಿರುದ್ಧ ತುಚ್ಛವಾಗಿ ಬರೆದಿದ್ದಾನೆ ಎಂದು ಆರೋಪಿಸಲಾಗಿದೆ.
ಬೊಂಬಾಟ್ ಚಾನೆಲ್ ಕಲ್ಲಿಗೆ
ನಿಂದನೆಯಿಂದಾಗಿ ಸಾರ್ವಜನಿಕವಾಗಿ ನಮ್ಮ ಸಮುದಾಯ ಮುಜುಗರ ಎದುರಿಸುತ್ತಿದೆ. ನಾವು ಪರಿಶಿಷ್ಟ ಜಾತಿಯಾಗಿರುವುದರಿಂದ
ಚಿತ್ರದ ಪ್ರಮೋಶನ್ ಹೊಣೆ ಹೊತ್ತವರದ್ದೇ ಆಗಿದೆ. ನಮ್ಮ ಸಮುದಾಯದ ವಿರುದ್ಧ ಬಂದಿರುವ ಸುಳ್ಳು ಆರೋಪ ಅಶ್ಲೀಲ ಸಮಾಜ ಘಾತುಕರು ನಮ್ಮ ಮೇಲೆ ಸವಾರಿ ಮಾಡುತ್ತಿದ್ದು, ಇದು ನಮ್ಮ ಕುಲ ಕಸುಬಿಗೆ ಮತ್ತು ಜಾತಿಗೆ ಮಾಡುತ್ತಿರುವ ಅವಮಾನವಾಗಿದೆ. ಆದ್ದರಿಂದ ಇವರ ಮೇಲೆ ಕಠಿಣ ಕ್ರಮವನ್ನು ಮುಖೇನ ತನಿಖೆಗೆ ಒಳಪಡಿಸಲು ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ಅವರ ಮೇಲೆ ಜಾತಿ ನಿಂದನೆ ಕೇಸು ದಾಖಲಿಸಿ ಇನ್ನು ಮುಂದಕ್ಕೆ ಹೀಗೆ ನಡೆಯದ ಹಾಗೆ ಎಲ್ಲಾ ಇಲಾಖೆ ಆದೇಶವನ್ನಿತ್ತು ಶೋಷಿತ ಸಮುದಾಯದ ನಮಗೆ ನ್ಯಾಯವನ್ನು ರಕ್ಷಣೆಯನ್ನು ಒದಗಿಸುವಂತೆ ದ.ಕ ಜಿಲ್ಲಾಧಿಕಾರಿ, ಮಂಗಳೂರು ಪೊಲೀಸ್ ಆಯುಕ್ತರಿಗೆ ಮಂಗಳೂರು ಪಾಣಾರ ಯಾನೆ ನಲಿಕೆ
ಸಮಾಜಸೇವಾ ಸಂಘ (ರಿ.)
ನಲಿಕೆ ಸಮುದಾಯದ ಪರವಾಗಿ
ಮೂಡುಶೆಡ್ಡೆ, ಮಂಗಳೂರು
ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ (ರಿ)
ವಾಮಂಜೂರು, ಮೂಡುಶೆಡ್ಡೆ ಮನವಿ ಮಾಡಿದೆ.



Post Comment