ಬೆಂಗಳೂರು, ಜೂನ್ 12:
ಅಕ್ರಂ ಪಾಷ, ಭಾರತೀಯ ಆಡಳಿತ ಸೇವೆ (ಭಾ.ಆ.ಸೇ.) ಅವರು ಇಂದು (12.06.2025) ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಮಚಂದ್ರನ್ ಆರ್., ಭಾ.ಆ.ಸೇ., ಅವರು ಕರ್ತವ್ಯ ಹಸ್ತಾಂತರಿಸಿದರು.
ಅಕ್ರಂ ಪಾಷ ಅವರು ಕರ್ನಾಟಕ ಗೃಹ ಮಂಡಳಿಯ ಆಯುಕ್ತರು ಹಾಗೂ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ಹಾಸನ ಹಾಗೂ ಕೋಲಾರ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ ಜನಸೇವೆ ನಡೆಸಿದ ಅನುಭವವು ಅವರಿಗಿದೆ.
Post Comment