ಬೆಂಗಳೂರು, ಜೂನ್ 5 :
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಅಧಿಕೃತ ಪ್ರಕಟಣೆಯಲ್ಲಿ ದಿನಾಂಕ 14-02-2020ರ ಜಾಹೀರಾತು ಸಂ.1/2020ನ ಆಧಾರದ ಮೇಲೆ ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗಾಗಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ.
ಈ ಆಯ್ಕೆಪಟ್ಟಿಯನ್ನು ನಿಗಮದ ಕೇಂದ್ರ ಕಚೇರಿ ಶಾಂತಿನಗರ, ಬೆಂಗಳೂರು ಹಾಗೂ ನಿಗಮದ ಅಧಿಕೃತ ವೆಬ್‌ಸೈಟ್ ksrtcjobs.karnataka.gov.in ನಲ್ಲಿ ಪ್ರಕಟಿಸಲಾಗಿದೆ.
ಪ್ರವರ್ಗವಾರು ಅಂತಿಮ ಅಂಕಗಳು ಮತ್ತು ಆಯ್ಕೆಯಾದ ಕೊನೆಯ ಅಭ್ಯರ್ಥಿಗಳ ಹುಟ್ಟಿದ ದಿನಾಂಕಗಳ ವಿವರಗಳನ್ನು ಪ್ರಕಟಿಸಲಾಗಿದೆ. ಸಾಮಾನ್ಯ, ಮೀಸಲಾತಿ, ಗ್ರಾಮೀಣ ಹಾಗೂ ಯೋಜನಾ ನಿರಾಶ್ರಿತ ಪ್ರವರ್ಗಗಳಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳ ವಿವರಗಳು ಪಟ್ಟಿಯಲ್ಲಿವೆ.
ಆಕ್ಷೇಪಣೆ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು ದಿನಾಂಕ 11-06-2025 ಸಂಜೆ 5.30ರ ಒಳಗೆ ನಿಗಮದ ನೇಮಕಾತಿ ಶಾಖೆ, ಶಾಂತಿನಗರ, ಬೆಂಗಳೂರು ಅಥವಾ ಇ-ಮೇಲ್ (dycpmrct@ksrtc.org) ಮೂಲಕ ಸಲ್ಲಿಸಬಹುದಾಗಿದೆ. ದಿನಾಂಕ 11-06-2025 ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ನಿಗಮವು ಈ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿದ್ದು ಯಾವುದೇ ಅವ್ಯವಹಾರದಲ್ಲಿ ತೊಡಗದಂತೆ ತೀವ್ರ ಎಚ್ಚರಿಕೆ ನೀಡಿದೆ.

Post Comment