ಪೆರ್ನೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 620 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 6ನೇ ಸ್ಥಾನವನ್ನು ಪಡೆಯುವ ಮೂಲಕ ಪೆರ್ನೆ ಗ್ರಾಮದ ಯುವ ಪ್ರತಿಭೆ ಮಹಮ್ಮದ್ ಅಯಾನ್ (S/O ಜಬ್ಬಾರ್) ಶ್ಲಾಘನೀಯ ಸಾಧನೆ ಮಾಡಿದ್ದು, ಅವರಿಗೆ ಪೆರ್ನೆ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಲತೀಫ್ ಪುರಿಯ ಅವರು ಮಾತನಾಡಿ, “ಇಂತಹ ಪ್ರತಿಭೆಗಳ ಉತ್ತೇಜನಕ್ಕೆ ಸಮಾಜದ ಬೆಂಬಲ ಅವಶ್ಯಕ. ಮಹಮ್ಮದ್ ಅಯಾನ್ ಭವಿಷ್ಯದಲ್ಲಿ ಐಎಎಸ್, ಐಪಿಎಸ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಲಿ ಎಂಬುದು ನಮ್ಮ ಆಶಯ,” ಎಂದು ಹೇಳಿದರು.
ಅಯಾನ್ ತನ್ನ ಯಶಸ್ಸಿಗೆ ಪೋಷಕರು, ಶಿಕ್ಷಕರು ಮತ್ತು ನಿರಂತರ ಶ್ರಮವೇ ಪ್ರಮುಖ ಕಾರಣವೆಂದು ಅಭಿಪ್ರಾಯಪಟ್ಟರು.
ಸನ್ಮಾನ ಸಮಾರಂಭದಲ್ಲಿ ಅಶ್ರಫ್ ಪಿ ಎಸ್, ಇರ್ಷಾದ್ ಎಸ್ ಎ, ಹನೀಫ್ ಪೆರ್ನೆ ಸೇರಿದಂತೆ ವೆಲ್ಫೇರ್ ಅಸೋಸಿಯೇಷನ್ ಪೆರ್ನೆಯ ಹಲವು ಸದಸ್ಯರು ಉಪಸ್ಥಿತರಿದ್ದರು.
Post Comment