ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿಯನ್ನು ಪಡೆದರು.
ಪ್ರಸ್ತುತ ಸಂಸ್ಥೆಗೆ ರಾಜ್ಯ ಸರ್ಕಾರವು ದುಡಿಯುವ ಬಂಡವಾಳಕ್ಕಾಗಿ 15 ಕೋಟಿಗಳನ್ನು ವಾರ್ಷಿಕ ಶೇ 10.25 ಬಡ್ಡಿ ದರದಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಿದೆ. ಇದರಿಂದ ರೈತರಿಂದ ಖರೀದಿಸುವ ಹಣ್ಣು ತರಕಾರಿಗಳಿಗೆ ಶೀಘ್ರವಾಗಿ ಹಣ ಪಾವತಿಸಿ ರೈತರಿಗೆ ಅನುಕೂಲ ಕಲ್ಪಿಸಲು ಸಭೆಯಲ್ಲಿ ತಿಳಿಸಿದರು.
ರೈತರ ಹಾಗೂ ಗ್ರಾಹಕರ ಸೇವೆ ಸಲ್ಲಿಸುತ್ತಿರುವ ಹಾಪ್ ಕಾಮ್ಸ್ ಸಂಸ್ಥೆಯನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದು ಅಂತಿಮವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ಸಂಸ್ಥೆಯ ಅಧ್ಯಕ್ಷರಾದ ಎನ್. ಗೋಪಾಲಕೃಷ್ಣ ಅವರು ಸಂಸ್ಥೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ಒದಗಿಸಿಕೊಡುವಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಸಚಿವರೊಂದಿಗೆ ಸಹಕಾರ ಸಂಘಗಳ ನಿಬಂಧಕರಾದ ಕುಮಾರ್, ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಡಿ ಎಸ್ ರಮೇಶ್, ಹಾಪ್ ಕಾಮ್ಸ್ ನ ಮಾಜಿ ಅಧ್ಯಕ್ಷರುಗಳಾದ ಎ.ಎಸ್ ಚಂದ್ರೇಗೌಡ ಹಾಗೂ ಎನ್ ದೇವರಾಜ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮಿರ್ಜಿ ಉಮೇಶ ಶಂಕರ, ಹಾಪ್ ಕಾಮ್ಸ್, ತೋಟಗಾರಿಕೆ ಮತ್ತು ಸಹಕಾರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Post Comment