BMTC ಸಾರಿಗೆ ಆಶಾಕಿರಣ ಯೋಜನೆಯಡಿ 28100 ನೌಕರರಿಗೆ ಕಣ್ಣಿನ ತಪಾಸಣೆ
ಬೆಂಗಳೂರು: ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)ಯು “ಸಾರಿಗೆ ಆಶಾಕಿರಣ ಯೋಜನೆ”ನಡಿ 28100 ನೌಕರರ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಮತ್ತು ಮೃತ ನೌಕರರ ಅವಲಂಬಿತರಿಗೆ ಪರಿಹಾರದ ಚೆಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಈ ಕಾರ್ಯಕ್ರಮವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ 50 ಘಟಕಗಳಲ್ಲಿ ಮತ್ತು 4 ಕಾರ್ಯಾಗಾರಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ತಪಾಸಣೆಗೆ ಒಳಪಡುವ ನೌಕರರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, “ನೌಕರರ ಜೀವ ಅಮೂಲ್ಯವಾಗಿದೆ. ಅವರ ಕುಟುಂಬಗಳಿಗೆ ದಯವಿಟ್ಟು ಬೆಲೆಗಟ್ಟಲು ಸಾಧ್ಯವಿಲ್ಲ. ಆದರೆ, ಯಾವುದೇ ದುರಂತದಿಂದ ಅಕಾಲಿಕವಾಗಿ ಮೃತರಾದ ನೌಕರರ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ,” ಎಂದರು.
ಈ ಸಮಯದಲ್ಲಿ, ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಗಳಿಗೆ ರೂ. 50 ಲಕ್ಷ ಮತ್ತು ಇತರೆ ಕಾರಣಗಳಿಂದ ಅಕಾಲಿಕವಾಗಿ ಮರಣಗೊಂಡ ನೌಕರರ ಕುಟುಂಬಗಳಿಗೆ ರೂ. 10 ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ. 2024ರ ಫೆಬ್ರವರಿ-2025ರ ಏಪ್ರಿಲ್ ವರೆಗೆ 107 ನೌಕರರ ಕುಟುಂಬಗಳಿಗೆ ರೂ. 7.3 ಕೋಟಿ ಪರಿಹಾರ ಪಾವತಿಸಲಾಗಿದೆ.
ಇನ್ನು, “ಏರೋ ಇಂಡಿಯಾ–2025” ಕಾರ್ಯಕ್ರಮದಲ್ಲಿ ಬಿಎಂಟಿಸಿ 364 ಬಸ್ಸುಗಳು ಅದರಲ್ಲಿ 199 ವಿಶೇಷ ಸಾರಿಗೆ ಸೇವೆಗಳನ್ನು ನೀಡಿದ್ದು, ಒಟ್ಟು 16,932 ಪ್ರಯಾಣಿಕರನ್ನು ಸೇರಿಸಿ ರೂ. 75.40 ಲಕ್ಷ ಆದಾಯ ಗಳಿಸಿದೆ.
ಬಿಎಂಟಿಸಿ ತಂಡವು “ಮಾಸ್ಟರ್ ಗೇಮ್ಸ್–2025″ನಲ್ಲಿ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಹಾಗೂ ವಾಲಿಬಾಲ್ನಲ್ಲಿ ತೃತೀಯ ಸ್ಥಾನ ಪಡೆದಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪುರಸ್ಕಾರ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಎನ್.ವಿ. ಪ್ರಸಾದ್, ರಾಮಚಂದ್ರನ್ ಭಾಆಸೇ, ಶಿಲ್ಪಾ, ಮತ್ತು ಸಿ-ಕ್ಯಾಂಪ್ ಪ್ರತಿನಿಧಿಗಳು ಭಾಗವಹಿಸಿದ್ದರು.
Post Comment