ಬೆಂಗಳೂರು, ಜೂನ್ ೧೦, ೨೦೨೪: ಬಿ.ಎಂ.ಟಿ.ಸಿಯಲ್ಲಿ 2,285 ನಿರ್ವಾಹಕ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಯಿತು. ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿಯವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
2018ರ ನಂತರ ಬಿ.ಎಂ.ಟಿ.ಸಿ.ಯಲ್ಲಿ ಯಾವುದೇ ನೇಮಕಾತಿ ನಡೆದಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 13-10-2023ರಂದು ನೇಮಕಾತಿಗೆ ಅನುಮತಿ ನೀಡಲಾಯಿತು. 03-04-2024ರಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಯಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪ್ರಮುಖ ಮಾಹಿತಿ:
– ಹುದ್ದೆಗಳು: 2,285 ನಿರ್ವಾಹಕ
– ಅರ್ಜಿದಾರರು: 23,021
– ಪರೀಕ್ಷೆ ನಡೆಸಿದ್ದು: KEA
ಈ ಹುದ್ದೆಗಳಿಗೆ 23,021 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅಂತಿಮ ಆಯ್ಕೆ ಪಟ್ಟಿಯನ್ನು ವರ್ಗ, ಮೀಸಲಾತಿ, ಶೇಕಡಾ ಅಂಕಗಳು ಮತ್ತು ಜನನ ದಿನಾಂಕಗಳೊಂದಿಗೆ KEA ಯೊಂದಿಗೆ ಪ್ರಕಟಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬಿ.ಎಂ.ಟಿ.ಸಿ.ಯಲ್ಲಿ ನೇಮಕಾತಿ ಪಡೆಯಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.



Post Comment