ಕೆಎಸ್ಸಾರ್ಟಿಸಿ ಪ್ರಕಟನೆಯ ಸಂಪೂರ್ಣ ಮಾಹಿತಿ ಓದಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಹಾಸನ ತರಬೇತಿ ಕೇಂದ್ರದಲ್ಲಿ ಚಾಲಕ-ಕಮ್-ನಿರ್ವಾಹಕ ಹುದ್ದೆಗಾಗಿ ಆಯ್ಕೆಗೊಂಡ 10 ತರಬೇತಿ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆಯನ್ನು 2024 ಡಿಸೆಂಬರ್ 16ರಿಂದ ಆರಂಭಿಸಲಾಗಿತ್ತು. ನಿಗಮದ ಅಧಿಕೃತ ವೆಬ್‌ಸೈಟ್ ಹಾಗೂ ಪತ್ರಿಕಾ ಪ್ರಕಟಣೆಗಳ ಮೂಲಕ ಕರೆಪತ್ರಗಳು ಪ್ರಕಟಿಸಲಾಯಿತು.
ಆದರೆ, ಕೆಲವು ಅಭ್ಯರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದ ಕಾರಣ, ಅವರಿಗೆ ಮತ್ತೊಂದು ಅವಕಾಶವನ್ನು ನೀಡಲಾಗಿದ್ದು, ಮರು ಪರೀಕ್ಷೆಯನ್ನು 2025 ಮೇ 8ರಿಂದ ಮೇ 20ರವರೆಗೆ ನಿಗದಿಪಡಿಸಲಾಗಿದೆ.
ಗೈರುಹಾಜರಾದ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್‌ಸೈಟ್ ksrtcjobs.karnataka.gov.in ಮೂಲಕ ಕರೆಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ಉಲ್ಲೇಖಿತ ದಾಖಲೆಗಳೊಂದಿಗೆ ನಿಗದಿತ ದಿನಾಂಕ ಮತ್ತು ಸಮಯಕ್ಕೆ ಹಾಜರಾಗಬೇಕು.
ಈ ಅವಕಾಶವು ಅಂತಿಮ ಅವಕಾಶವಾಗಿದ್ದು, ನಂತರ ಯಾವುದೇ ರೀತಿಯ ಪರೀಕ್ಷಾ ಅವಕಾಶ ನೀಡಲಾಗುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್ ವೀಕ್ಷಿಸಲು ಸೂಚಿಸಲಾಗಿದೆ.
Post Comment