ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್.ಡಿ.ಎಂ ಶಾಲೆಯ ಇಬ್ಬರು ಮೇಧಾವಿ ವಿದ್ಯಾರ್ಥಿನಿಯರು ಈ ವರ್ಷದ ಎಸ್.ಎಲ್.ಸಿ (SSLC) ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ತಾಲೂಕಿನ ಹೆಸರು ಹೆಚ್ಚಿಸಿದ್ದಾರೆ.
ಫಾತಿಮ ಅಮ್ನಾ: (ಎಸ್.ಡಿ.ಎಂ ಏಯ್ಡೆಡ್ ಮಾಧ್ಯಮಿಕ ಶಾಲೆ) ತನ್ನ 10ನೇ ತರಗತಿಯ ವ್ಯಾಸಂಗದ ಫಲವಾಗಿ 515 ಅಂಕಗಳು (84%) ಸಾಧಿಸಿ ಉತ್ತೀರ್ಣಳಾಗಿದ್ದಾಳೆ. ಉಜಿರೆಯ ನಡ ಗ್ರಾಮದವರಾದ ಇವರು ತಂದೆ ಅಕ್ಬರ್ ಅಲಿ ಮತ್ತು ತಾಯಿ ಆತಿಕಾ ಸಹಕಾರದಿಂದ ಈ ಸಾಧನೆ ಮಾಡಿದ್ದಾರೆ.
ಆಯಿಶತಲ್ ಶೈಮಾ: (ಎಸ್.ಡಿ.ಎಂ ಆಂಗ್ಲ ಮಾಧ್ಯಮಿಕ ಶಾಲೆ) 559 ಅಂಕಗಳು (89%) ಪಡೆದು ಡಿಸ್ಟಿಂಕ್ಷನ್‌ನೊಂದಿಗೆ ಉತ್ತೀರ್ಣಳಾಗಿ ತನ್ನ ಶಾಲೆ ಮತ್ತು ಲಾಯಿಲ ಗ್ರಾಮದ ಗೌರವವನ್ನು ಹೆಚ್ಚಿಸಿದ್ದಾಳೆ. ಅವಳ ತಂದೆ ಸುಲೈಮಾನ್ ಮತ್ತು ತಾಯಿ ಝಬೈದಾ ಅವರ ಆದರ ಮತ್ತು ಪ್ರೋತ್ಸಾಹವೇ ಅವಳ ಯಶಸ್ಸಿನ ರಹಸ್ಯ.
ಶಿಕ್ಷಕರು, ಪೋಷಕರು ಮತ್ತು ಗ್ರಾಮಸ್ಥರು ಇಬ್ಬರಿಗೂ ಅಭಿನಂದನೆ ಸಾರಿ, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಶುಭಾಶಯಗಳನ್ನು ತಿಳಿಸಿದ್ದಾರೆ.
ಕಷ್ಟ ಮತ್ತು ನಿರಂತರ ಪರಿಶ್ರಮವೇ ಯಶಸ್ಸಿನ ಮೂಲ ಎಂಬುದನ್ನು ಈ ಇಬ್ಬರು ವಿದ್ಯಾರ್ಥಿನಿಯರ ಸಾಧನೆ ಸಾರಿ ತೋರಿಸಿದೆ.
Post Comment