ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಗೆ ಮತ್ತಷ್ಟು ಬಲ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್ ಅವರನ್ನು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ (PRCI) ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಮಂಡಳಿಯ ಗೌರವಾಧ್ಯಕ್ಷ ಮತ್ತು ಮುಖ್ಯಸ್ಥರಾದ ಎಂ. ಬಿ. ಜಯರಾಂ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷರಾದ ಗೀತಾ ಶಂಕರ್ ತಿಳಿಸಿದ್ದಾರೆ.
ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ದೇಶದೆಲ್ಲೆಡೆ 85 ಶಾಖೆಗಳನ್ನು ಹೊಂದಿದ್ದು, ಸಿಂಗಾಪುರ್, ಲಂಡನ್, ಶ್ರೀಲಂಕಾ, ದುಬೈ, ನೇಪಾಳ, ಆಸ್ಟ್ರೇಲಿಯಾ, ಅಮೆರಿಕಾ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತನ್ನ ಶಾಖೆಗಳನ್ನು ಸ್ಥಾಪಿಸಿದೆ. ಇದರ ಜೊತೆಗೆ, YCC (ಯಂಗ್ ಕಮ್ಯುನಿಕೇಟರ್ಸ್ ಕ್ಲಬ್ ಆಫ್ PRCI) ಸಂಸ್ಥೆಯು ದೇಶಾದ್ಯಂತ 70 ಕ್ಕೂ ಹೆಚ್ಚು ಕಾಲೇಜುಗಳಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸಿಕೊಂಡಿದೆ.
ಡಾ. ಲತಾ ಟಿ.ಎಸ್ ಅವರ ನೇಮಕದಿಂದ ಮಂಡಳಿಯ ಕಾರ್ಯಚಟುವಟಿಕೆಗಳು ಮತ್ತಷ್ಟು ಬಲವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಾ. ಲತಾ ಟಿ.ಎಸ್ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ದೀರ್ಘ ಅನುಭವವನ್ನು ಹೊಂದಿದ್ದು, ತಮ್ಮ ಪ್ರಭಾವಿ ಸೇವೆ ಮೂಲಕ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ. ಉತ್ತಮ ಸಂವಹನ ಕೌಶಲ್ಯ, ಕ್ರಿಯಾತ್ಮಕ ಚಿಂತನೆ ಮತ್ತು ನೇತೃತ್ವ ಗುಣಗಳಿಂದ ಅವರು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ತತ್ವ, ಮೌಲ್ಯವನ್ನು ಮುಂದುವರಿಸಲು ಮಹತ್ತರ ಪಾತ್ರವಹಿಸಲಿದ್ದಾರೆ.
Post Comment