ಬಿಜೆಪಿ ಪಕ್ಷದ ಒತ್ತಡದಿಂದಾಗಿ ರಾಜ್ಯಪಾಲರು ಅನುಮೋದನೆ ನೀಡಿಲ್ಲ; ಆರೋಪ
ಬೆಂಗಳೂರು: ರಾಜ್ಯದ ಅರ್ಚಕರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ರೂಪಿಸಿದ ಕಾಯಿದೆಗೆ ರಾಜ್ಯಪಾಲರು ಸಹಿ ಹಾಕದಿರುವುದರ ಬಗ್ಗೆ ಅರ್ಚಕ ಸಮುದಾಯದಲ್ಲಿ ಅಸಮಾಧಾನ ಹೆಚ್ಚಾಗಿದೆ. ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನಗಳು ಮತ್ತು ಅರ್ಚಕರ ಏಳಿಗೆಗಾಗಿ ರೂಪಿಸಲಾದ ಈ ಯೋಜನೆಗೆ ಬಿಜೆಪಿ ಪಕ್ಷದ ಒತ್ತಡದಿಂದಾಗಿ ರಾಜ್ಯಪಾಲರು ಅನುಮೋದನೆ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ಸರ್ಕಾರವು ಅರ್ಚಕರಿಗೆ ಮನೆ ನಿರ್ಮಾಣ, ₹10 ಲಕ್ಷ ಜೀವ ವಿಮೆ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಮತ್ತು ‘ಸಿ’ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ನಿಗದಿತ ನಿಧಿ ಹಂಚಿಕೆ ಮಾಡುವ ಕಾಯಿದೆಗೆ ವರ್ಷವಾದರೂ ರಾಜ್ಯಪಾಲರ ಅಂಕಿತ ಸಿಗದೆ ಇರುವುದಕ್ಕೆ ಅರ್ಚಕರು ನಿರಾಶೆ ವ್ಯಕ್ತಪಡಿಸಿದ್ದಾರೆ.
ತಸ್ತೀಕ್ ಮೊತ್ತದಲ್ಲಿ ಹೆಚ್ಚಳ
ಅರ್ಚಕರ ಕಷ್ಟ-ಕಾರ್ಪಣ್ಯಗಳನ್ನು ಗಮನಿಸಿ, ಕಾಂಗ್ರೆಸ್ ಸರ್ಕಾರ ತಸ್ತೀಕ್ ಮೊತ್ತವನ್ನು ₹60,000 ರಿಂದ ₹72,000 ಗೆ ಹೆಚ್ಚಿಸಿದೆ. ಇದಕ್ಕೂ ಮುಂಚೆ 2013, 2015, 2017 ಮತ್ತು 2025ರಲ್ಲಿ ಒಟ್ಟು ನಾಲ್ಕು ಬಾರಿ ತಸ್ತೀಕ್ ಮೊತ್ತವನ್ನು ಹೆಚ್ಚಿಸಲಾಗಿತ್ತು.
ಅರ್ಚಕರ ನಿಯೋಗ ರಾಜ್ಯಪಾಲರನ್ನು ಭೇಟಿ:
ಈ ವಿಳಂಬದ ಬಗ್ಗೆ ತಿಳಿಯಲು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ (ರಿ.) ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಲಿದೆ ಎಂದು ತಿಳಿದು ಬಂದಿದೆ.
ಡಾ. ರಾಧಾಕೃಷ್ಣ ಕೆ.ಇ. (ಗೌರವ ಪ್ರಧಾನ ಸಲಹೆಗಾರ),
ಡಾ. ಎಸ್.ಆರ್. ಶೇಷಾದ್ರಿ ಭಟ್ಟರ್ (ಗೌರವ ಉಪಾಧ್ಯಕ್ಷ),
ಡಾ. ಕೆ.ಎಸ್.ಎನ್. ದೀಕ್ಷಿತ್ (ಮುಖ್ಯ ಪ್ರಧಾನ ಕಾರ್ಯದರ್ಶಿ) ಸೇರಿದಂತೆ ಅರ್ಚಕರ ಸಂಘ ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದೆ.
Post Comment