ನವದೆಹಲಿ, 28 ಫೆಬ್ರವರಿ 2025: ಗವರ್ನೆನ್ಸ್ ನೌ ಸಂಸ್ಥೆಯು ಆಯೋಜಿಸಿದ 11ನೇ PSU ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ.) ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಭಾಸ್ಕರ್ ಅವರು ಗೌರವಾನ್ವಿತರಾಗಿದ್ದಾರೆ. ಈ ಸಮಾರಂಭವು ಹಾಲಿಡೇ ಇನ್, ಏರೋ ಸಿಟಿ, ನವದೆಹಲಿಯಲ್ಲಿ ನಡೆಯಿತು.
ಅನ್ಬುಕುಮಾರ್ ಭಾಸ್ಕರ್ ಅವರಿಗೆ PSU ಆತ್ಮನಿರ್ಭರ ನಾಯಕತ್ವ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಯನ್ನು ಭಾರತ ಸರ್ಕಾರದ ಕಲ್ಲಿದ್ದಲು ಮತ್ತು ಗಣಿ ರಾಜ್ಯ ಸಚಿವ ಶ್ರೀ. ಸತೀಶ್ ಚಂದ್ರ ದುಬೆ ಮತ್ತು ಮಾಜಿ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಅವರು ಪ್ರದಾನ ಮಾಡಿದರು.
ಕೆ.ಎಸ್.ಆರ್.ಟಿ.ಸಿ.ಯು ತನ್ನ ಸೇವೆಗಳ ಮೂಲಕ ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಮಹತ್ತರವಾಗಿ ಸುಧಾರಿಸಿದೆ. ಇದುವರೆಗೆ ನಿಗಮವು 1,314 ಬಸ್ಸುಗಳನ್ನು ಪುನಶ್ಚೇತನಗೊಳಿಸಿದೆ. ಇದರಲ್ಲಿ ಕರ್ನಾಟಕ ಸಾರಿಗೆಗೆ 1,184, ನಗರ ಸಾರಿಗೆಗೆ 115 ಮತ್ತು ಐರಾವತ ಕ್ಲಬ್ ಕ್ಲಾಸ್ 15 ಬಸ್ಸುಗಳು ಸೇರಿವೆ. ಈ ಯೋಜನೆಯಿಂದ 250 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಉಳಿತಾಯ ಮಾಡಲಾಗಿದೆ. ಇದು ಆತ್ಮನಿರ್ಭರ ಭಾರತ್ ಪರಿಕಲ್ಪನೆಯಡಿ ಸ್ವಾವಲಂಬನೆಯನ್ನು ಉತ್ತೇಜಿಸುವ ಯೋಜನೆಯಾಗಿ ಹೊರಹೊಮ್ಮಿದೆ.
ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ.ಯ ಉಪಮುಖ್ಯ ಯಾಂತ್ರಿಕ ಅಭಿಯಂತರ ಬಿ.ಎಸ್. ನಾಗರಾಜ ಮೂರ್ತಿ ಅವರು ಸಹ ಉಪಸ್ಥಿತರಿದ್ದರು.
ಕೆ.ಎಸ್.ಆರ್.ಟಿ.ಸಿ.ಯ ಸಾಧನೆಗಳು ಮತ್ತು ಅನ್ಬುಕುಮಾರ್ ಭಾಸ್ಕರ್ ಅವರ ನಾಯಕತ್ವವು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂಬುದು ಈ ಪ್ರಶಸ್ತಿಯಿಂದ ಸ್ಪಷ್ಟವಾಗಿದೆ.
Post Comment