ಬೆಂಗಳೂರು: ಸುಮಾರು ಮೂರೂವರೆ ದಶಕದಿಂದಲೂ ಮೂರು ವರ್ಷಗಳಿಗೊಮ್ಮೆ ಕುಂಭಮೇಳವನ್ನು ತಿನರಸೀಪುರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ.
ಟಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣಕಾಶಿಯಲ್ಲಿ ನಡೆಯುವ ಕುಂಭಮೇಳ ಭಾರತೀಯರಿಗೆ ಸನಾತನ ಸಂಸ್ಕೃತಿ ಮತ್ತು ದಿವ್ಯ ಜೀವನ ಧರ್ಮವನ್ನು ಸಾರುವ ಧಾರ್ಮಿಕ ಕಾರ್ಯಕ್ರಮವಾಗಿದೆ. ದಕ್ಷಿಣ ಭಾರತದಲ್ಲಿ ಈ ಪುಣ್ಯಸ್ನಾನವನ್ನು
ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರು
ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರ, ಶ್ರೀ ಜಯೇಂದ್ರಪುರಿ ಮಹಾ ಸ್ವಾಮಿಗಳವರು
ತಿರುಚ್ಚಿ ಮಹಾಸಂಸ್ಥಾನ ಮಠ, ಕೈಲಾಸಾಶ್ರಮ ಇವರ ಸಾನಿಧ್ಯದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುವ ಸ್ಥಳ ಇದಾಗಿದೆ. ರಾಜ್ಯದಲ್ಲಿನ ವಿವಿಧ ಮಠಗಳು ಹಾಗೂ ದೇವಾಲಗಳಿಗೆ ಮುಖ್ಯಮಂತ್ರಿಗಳ ವಿಶೇಷ ಸಹಾಯಧನದ ಅನುದಾನದಲ್ಲಿ ರೂ 6 ಕೋಟಿಗಳನ್ನು ಮಾನ್ಯ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪರವರು ಸಂಗಮದ ಪುಣ್ಯಕ್ಷೇತ್ರದಲ್ಲಿ ಫೆಬ್ರವರಿ 2025ರ ದಿನಾಂಕ 10. 11. 12ರಂದು ನಡೆಯುವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಮತ್ತು ವಿಜೃಂಭಣೆಯಿಂದ ನಡೆಸಲು ಸಕಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ತಿರುಮಕೂಡಲು ನರಸೀಪುರ ( ಟಿ. ನರಸೀಪುರ) ಇಲ್ಲಿ ಸೇರುವ ನದಿಗಳ ಸಂಗಮದಲ್ಲಿ ಕಾವೇರಿ, ಕಬಿನಿ ಮತ್ತು ಸ್ಪಟಿಕ ಸರೋವರದ ಸಂಗಮ ಸ್ಪಟಿಕ ಸರೋವರ ಇದು ಗುಪ್ತ ಗಾಮಿನಿಯಾಗಿದೆ ಎಂದು ಹೇಳಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು, ಪ್ರವಾಸಿಗರು ಆಗಮಿಸುವುದಿಂದ ನರಸೀಪುರ ಪಟ್ಟಣದಲ್ಲಿಯೇ ಸಕಲ ಸೌಲಭ್ಯಗಳನ್ನು ಕಲ್ಪಿಸಲು ತಯಾರಿ ಮಾಡಿಕೊಳ್ಳಲು ಈ ಅನುದಾನ ಬಳಸಿಕೊಳ್ಳಲಾಗುವುದು.
ಕಳೆದ ಹನ್ನೊಂದು ಕುಂಭಮೇಳಗಳನ್ನು ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಎಲ್ಲಾ ಧರ್ಮಪೀಠಗಳ ನೇತೃತ್ವದಲ್ಲಿ ಸಾವಿರಾರು ಸಾಧು ಸಂತರು ಮತ್ತು ಲಕ್ಷಾಂತರ ಭಕ್ತಾದಿಗಳೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಕೋವಿಡ್ ಕಾರಣದಿಂದಾಗಿ 2022ರಲ್ಲಿ ನಡೆಯಬೇಕಿದ್ದ 12ನೇ ಕುಂಭಮೇಳ ನಡೆಯಲಿಲ್ಲ. ಪ್ರಸ್ತುತ ನಡೆಯಲಿರುವ ಮಹಾಕುಂಭಮೇಳವು 12ನೇ ಕುಂಭಮೇಳವಾಗಿ, ಈ ಪುಣ್ಯಕ್ಷೇತ್ರದಲ್ಲಿ ನಾಡಿನ ಹಲವಾರು ಧಾರ್ಮಿಕ ಮುಖಂಡರು ಮತ್ತು ಸಾಧುಸಂತರು ಹಾಗೂ ರಾಜ್ಯ ಸರ್ಕಾರದ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.



Post Comment