×

ಬಿಎಂಟಿಸಿ: ಮೃತ ನೌಕರರ ಕುಟುಂಬಗಳಿಗೆ ಪರಿಹಾರ ಧನ ವಿತರಿಸಿದ ಸಚಿವ ರಾಮಲಿಂಗ ರೆಡ್ಡಿ

ಕೆನರಾ ಬ್ಯಾಂಕ್ ನೊಂದಿಗೆ ರೂ. 1.50 ಕೋಟಿ ರೂ. ಅಪಘಾತ ಪರಿಹಾರ ವಿಮಾ ಯೋಜನೆಯ ಒಡಂಬಡಿಕೆ 

ಬೆಂಗಳೂರು: ಕೆನರಾ ಬ್ಯಾಂಕ್ ನೊಂದಿಗೆ ರೂ. 1.50 ಕೋಟಿ ರೂ. ಅಪಘಾತ ಪರಿಹಾರ ವಿಮಾ ಯೋಜನೆಯ ಒಡಂಬಡಿಕೆ ಮತ್ತು ಮೃತಾವಲಂಬಿತರಿಗೆ ರೂ. 1 ಕೋಟಿ ವಿಮಾ ಪರಿಹಾರ ಮೊತ್ತದ ಚೆಕ್ ವಿತರಣಾ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಲಾಯಿತು.

%voice of karnataka % top kannada news

ಬೆಂ.ಮ.ಸಾ.ಸಂಸ್ಥೆಯು ಒಟ್ಟು 51 ಘಟಕಗಳನ್ನು ಹೊಂದಿದೆ. ಪ್ರತಿದಿನ 5861 ಅನುಸೂಚಿಗಳಿಂದ 61536 ಸುತ್ತುವಳಿಗಳನ್ನು 12.04 ಲಕ್ಷ ಕಿ.ಮೀ.ಗಳಲ್ಲಿ ಆಚರಣೆಗೊಳಿಸಲಾಗುತ್ತಿದೆ. ಪ್ರತಿ ದಿನ ಸರಾಸರಿ 40 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ನಗರದಲ್ಲಿ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಪ್ರಸ್ತುತ 1279 ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ 352 ಎಲೆಕ್ನಿಕ್ ಬಸ್ಸುಗಳನ್ನು ಸೇರ್ಪಡೆಗೊಳಿಸಲು ಯೋಜಿಸಲಾಗಿದೆ.

%voice of karnataka % top kannada news

ಪ್ರಸ್ತುತ ಒಟ್ಟು 6158 ವಾಹನಗಳನ್ನು ಹೊಂದಿದ್ದು, ಪರಿಸರಸ್ನೇಹಿ ಹಾಗೂ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಬಿಎಂಟಿಸಿ ಕ್ರಮ ಕೈಗೊಂಡಿದೆ.

*ಕೆನರಾ ಬ್ಯಾಂಕ್ ವೇತನ ಖಾತೆ ಯೋಜನೆ:-*

ಬಿಎಂಟಿಸಿ ಕೆನರಾ ಬ್ಯಾಂಕ್‌ನೊಂದಿಗೆ ಮೂರು ವರ್ಷಗಳ ಅವಧಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ಈ ಒಡಂಬಡಿಕೆಯನ್ವಯ ಬ್ಯಾಂಕ್ ನಲ್ಲಿ ವೇತನ ಖಾತೆ ಹೊಂದಿರುವ ಅಧಿಕಾರಿ/ನೌಕರರು ಅಪಘಾತ (ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತ ಸೇರಿದಂತೆ) ಮೃತಪಟ್ಟಲ್ಲಿ, ಅವರ ನಾಮನಿರ್ದೇಶಿತರಿಗೆ ರೂ. 1.00 ಕೋಟಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಂತೆ, ಸಂಸ್ಥೆಯು 50 ಲಕ್ಷ ರೂಪಾಯಿಗಳನ್ನು ಸಹ ನೀಡುತ್ತಿದ್ದು, ಒಟ್ಟು 1.50 ಲಕ್ಷ ರೂಪಾಯಿಗಳನ್ನು ಮೃತ ಸಿಬ್ಬಂದಿಗಳ ಕುಟುಂಬಕ್ಕೆ ನೀಡಲಾಗುವುದು ಎಂದು ತಿಳಿಸಿದೆ.

ದಿನಾಂಕ:01.02.2025 ರಂದು 4 ಜನ ಮೃತಾವಲಂಬಿತರಿಗೆ ಈ ದಿನ ರೂ.1 ಕೋಟಿ ಚೆಕ್ ವಿತರಿಸಲಾಗಿದೆ. 5 ಜನ ಮೃತಾವಲಂಬಿತರಿಗೆ ಸಂಸ್ಥೆಯ ಗುಂಪು ವಿಮಾ ಯೋಜನೆಯಡಿಯಲ್ಲಿ ತಲಾ ರೂ.10.00 ಲಕ್ಷಗಳನ್ನು ಇಂದು ವಿತರಿಸಿದೆ.                                                                                                                                                            

ಸಂಸ್ಥೆಯ ಗುಂಪು ವಿಮಾ ಯೋಜನೆಯ ಮಾಹಿತಿ:

* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಜಾರಿಯಲ್ಲಿದ್ದ ಗುಂಪು ವಿಮಾ ಯೋಜನೆಯನ್ನು ಪರಿಷ್ಕರಿಸಿ, ಅಧಿಕಾರಿ/ನೌಕರರ ವಂತಿಗೆ ರೂ.350/- ಮತ್ತು ಸಂಸ್ಥೆಯ ವಂತಿಗೆ 150/- ಒಟ್ಟು ರೂ. 500/-ವಂತಿಗೆಯೊಂದಿಗೆ ಅಪಘಾತದಿಂದ (ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತ ಸೇರಿದಂತೆ) ಮೃತಪಟ್ಟಲ್ಲಿ ರೂ.50.00 ಲಕ್ಷ ಮತ್ತು ಸ್ವಾಭಾವಿಕ ಹಾಗೂ ಇನ್ನಿತರೆ ಕಾರಣಗಳಿಂದ ಮೃತಪಟ್ಟಲ್ಲಿ, ರೂ.10.00 ಲಕ್ಷ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವ ಯೋಜನೆಯನ್ನು ದಿನಾಂಕ:19.02.2024 ರಿಂದ ಜಾರಿಗೆ ತರಲಾಗಿರುತ್ತದೆ.

  • ದಿನಾಂಕ:19.02.2024 ರಿಂದ ಜನವರಿ-2025 ರವರೆಗೆ 86 ನೌಕರರುಗಳು ಮೃತಪಟ್ಟಿದ್ದು, ಅದರಲ್ಲಿ ಸ್ವಾಭಾವಿಕ ಹಾಗೂ ಇನ್ನಿತರೆ ಕಾರಣಗಳಿಂದ ಒಟ್ಟು 77 ನೌಕರರು ಮೃತಪಟ್ಟಿದ್ದು ಅದರಲ್ಲಿ 46 ಮೃತ ನೌಕರರುಗಳ ನಾಮನಿರ್ದೇಶಿತರಿಗೆ ಸಂಸ್ಥೆಯ ಗುಂಪು ವಿಮಾ ಯೋಜನೆಯಡಿಯಲ್ಲಿ ತಲಾ ರೂ.10.00 ಲಕ್ಷದಂತೆ ರೂ.4,60,00,000/- ಗಳನ್ನು ಪಾವತಿಸಲಾಗಿರುತ್ತದೆ. ಉಳಿದ 31 ಪ್ರಕರಣಗಳು ದಾಖಲಾತಿ ಪರಿಶೀಲನಾ ಹಂತದಲ್ಲಿರುತ್ತದೆ.

ಬೆಂ.ಮ.ಸಾ.ಸಂಸ್ಥೆಯು ಕೈಗೊಂಡಿರುವ ಕಾರ್ಮಿಕ ಕಲ್ಯಾಣ ಕಾರ್ಯಗಳು

> 45 ವರ್ಷ ಮೇಲ್ಪಟ್ಟ ನೌಕರರು ಮತ್ತು ಅಧಿಕಾರಿಗಳ ಹೃದಯ ಸಂಬಂಧಿ ತಪಾಸಣೆಗಳನ್ನು ನಡೆಸಲು ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ 05 ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿರುತ್ತದೆ.

> ಸಂಸ್ಥೆಯು ಇಲ್ಲಿಯವರೆಗೆ 12751 ಉದ್ಯೋಗಿಗಳ ಹೃದಯ ಆರೋಗ್ಯ ತಪಾಸಣೆಗಾಗಿ ಪ್ರತಿಯೊಬ್ಬರಿಗೂ ರೂ.1200/- ರಂತೆ ಒಟ್ಟು ರೂ.1,53,01,200/-ಗಳನ್ನು  ಜಯದೇವ ಆಸ್ಪತ್ರೆಗೆ ಪಾವತಿಸಲಾಗಿದೆ.

> ಪ್ರತಿ ವಾರ ಶನಿವಾರ ಮತ್ತು ಭಾನುವಾರದಂದು ಅಧಿಕಾರಿ/ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ವಾಯು ಮತ್ತು ಸ್ಟೀಪ್ ಕ್ಲಿನಿಕ್‌ನಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದಂತೆ ಉಚಿತವಾಗಿ ಇಲ್ಲಿಯವರೆವಿಗೂ 1853 ನೌಕರರು ತಪಾಸಣೆಗೆ ಒಳಪಟ್ಟಿರುತ್ತಾರೆ. ಸಮಸ್ಯೆ ಇದ್ದವರಿಗೆ ಚಿಕಿತ್ಸೆಯನ್ನು ತೆಗೆದುಕೊಂಡಿದ್ದಾರೆ.

> 2023-24 ನೇ ಸಾಲಿನಲ್ಲಿ ಸಂಸ್ಥೆಯ ಎಲ್ಲಾ ಘಟಕಗಳು/ಕಾರ್ಯಾಗಾರಗಳಲ್ಲಿ 117 ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ.

> ಬೆಂ.ಮ.ಸಾ.ಸಂಸ್ಥೆಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ UMI ಮತ್ತು PRCI ನಂತಹ ಪ್ರತಿಷ್ಠಿತ ಪ್ರಶಸ್ತಿಗಳು ಬಂದಿದ್ದು, ಸಂಸ್ಥೆಗೆ ಒಟ್ಟು 144 ಪ್ರಶಸ್ತಿಗಳು ಲಭಿಸಿವೆ.


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2500 ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೊಳಿಸಲು ಕ್ರಮ ಜರುಗಿಸಲಾಗಿದ್ದು,
  ಮೊದಲ ಹಂತದಲ್ಲಿ 371(ಜೆ) ಮೀಸಲಾತಿಯಡಿಯಲ್ಲಿ ಆಯ್ಕೆಗೊಂಡ ಅರ್ಹ ಅಭ್ಯರ್ಥಿಗಳಿಗೂ ಈಗಾಗಲೆ ಭರ್ತಿ ಮಾಡಿಕೊಂಡಿದ್ದು, ಇನ್ನುಳಿದಂತೆ ಉಳಿಕೆ ಮೂಲ ವೃಂದದ ಹುದ್ದೆಗಳಿಗೆ 2286 ಅರ್ಹ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ, ಈಗಾಗಲೆ ಸಂಭವನೀಯ ಆಯ್ಕೆ ಪಟ್ಟಿಯನ್ನು ಸಂಸ್ಥೆಯ ವೆಬ್‌ಸೈಟ್‌ ನಲ್ಲಿ ಬಿತ್ತರಿಸಲಾಗಿದೆ.

> ಸಂಸ್ಥೆಯಲ್ಲಿನ ఖాలి ಹುದ್ದೆಗಳ ಲಭ್ಯತೆಗನುಗುಣವಾಗಿ ಮೃತಾವಲಂಬಿತರುಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿ ಇಲ್ಲಿಯವರೆಗೆ 310 ಮೃತಾವಲಂಬಿತರುಗಳಿಗೆ ನೇಮಕಾತಿ ಆದೇಶವನ್ನು ನೀಡಿದೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed