ಹಿಂದೆ ಮಳೆ ಬಂದಾಗ ಮುಳುಗಿ ಸುದ್ದಿಯಾಗುತ್ತಿದ್ದ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿದ್ದ ಸಚಿವರು
ಬೆಂಗಳೂರು: ಬೆಂಗಳೂರಿನ ಹಲವೆಡೆ ಮಳೆ ಬಂದಾಗ ಆಗುತ್ತಿದ್ದ ಆನಾಹುತಗಳನ್ನು ನೋಡಿದ ಒಬ್ಬ ಸಾಮಾಜಿಕ ಬಳಕೆದಾರರು ಮಾಡಿರುವ ಟ್ಟೀಟ್ ಈಗ ಎಲ್ಲರ ಗಮನ ಸೆಳೆದಿದೆ. ಕೋರಮಂಗಲ ಹೇಗೆ ಮಳೆಯ ಅನಾಹುತದಿಂದ ಪರಿಹಾರ ಕ್ರಮಗಳ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
ಕೋರಮಂಗಲ, ST BED, ಈಜಿಪುರ, ರಾಜೇಂದ್ರ ನಗರ, National Games Village ಮತ್ತು ವೆಂಕಟೇಶ್ವರ ಬಡಾವಣೆ ಮಡಿವಾಳ, ಪ್ರದೇಶಗಳಲ್ಲಿ ಮಳೆ ಬಂತೆಂದರೆ ಅಕ್ಷರಶಃ ನರಕ ಸದೃಶ ದೃಶ್ಯ ಕಾಣಸಿಗುತ್ತಿತ್ತು. ಕಳೆದ 20 ವರ್ಷಗಳ ಸಮಸ್ಯೆಗೆ ಪರಿಹಾರ ಕಂಡುಕೊಂಡ ರೀತಿ ಇತರರಿಗೆ ಮಾದರಿಯಾಗಿದೆ.
ಒಬ್ಬ ಜನಪ್ರತಿನಿಧಿ ಯಾವ ರೀತಿ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಜಲ್ವಂತ ಉದಾಹರಣೆ ರಾಮಲಿಂಗಾ ರೆಡ್ಡಿ ಅವರ ವಿಧಾನಸಭಾ ಕ್ಷೇತ್ರ. ಜನರಿಗೆ ಬಹುಮುಖ್ಯವಾಗಿ ಬೇಕಾಗಿರುವುದು ವಸತಿ ಸೌಲಭ್ಯ, ಸುಸಜ್ಜಿತ ರಸ್ತೆ, ಗುಣಮಟ್ಟದ ಶಿಕ್ಷಣ ಇವೆಲ್ಲವುಗಳು ಒಂದೇ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಜನರಿಗೆ ಸಿಗುವಂತೆ ಮಾಡಿರುವ ಹೆಗ್ಗಳಿಕೆ ರಾಮಲಿಂಗಾರೆಡ್ಡಿ ಅವರದ್ದು. ಇಂದಿನ ಜನ ಯಾರೋಬ್ಬರನ್ನು ಸತತವಾಗಿ 8 ಬಾರಿ ಆಯ್ಕೆ ಮಾಡುವುದು ಕಷ್ಟ, ಆಯ್ಕೆ ಮಾಡಿದ್ದಾರೆ ಅಂದರೆ ಅದಕ್ಕೆ ಉತ್ತರ ಒಂದೇ ಕ್ಷೇತ್ರದ ಅಭಿವೃದ್ಧಿ.

2015 ಕೋರಮಂಗಲದ ಚಿತ್ರಣ ಎಲ್ಲರ ಕಣ್ಣಮುಂದೆ ಬಂದು ನಿಲ್ಲುತ್ತದೆ. ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡ ಲೇಔಟ್ ಗಳು, ನೀರು ತುಂಬಿದ ರಸ್ತೆಗಳು, ಮನೆಗಳು, ಜನರು ಮನೆಯಿಂದ ಹೊರಗೆ ಬರಲಾಗದೆ , ನೀರು ಊಟಕ್ಕೆ ಪರದಾಡುವ ಪರಿಸ್ಥಿತಿ ಯಾರೊಬ್ಬರೂ ಇದನ್ನು ಮರೆತಿರಲಾರರು.
ಇಂತಹ ಅವಸ್ಥೆಗಳಿಗೆಲ್ಲಾ ಕಾರಣ ಕೆಟ್ಟ ಅವೈಜ್ಞಾನಿಕ ನಗರ ಯೋಜನೆ ( Town Planning), ಕೆರೆಗಳ ಆಕ್ರಮಣ, ಎಲ್ಲೆಂದರಲ್ಲಿ ಮನೆ ನಿರ್ಮಾಣ, ವ್ಯವಸ್ಥಿತವಲ್ಲದ ಚರಂಡಿ ಯೋಜನೆಗಳು.
ಇವೆಲ್ಲವುಗಳ ಹೊರತಾಗಿಯೂ ಹೇಗೆ ಇಂತಹ ಪರಿಸ್ಥಿತಿಗೆ ಪರಿಹಾರ ಹುಡುಕಬಹುದು ಎಂಬುದು ಕೋರಮಂಗಲದ ಇವತ್ತಿನ ಚಿತ್ರಣ ನೋಡಿದರೆ ತಿಳಿಯುತ್ತದೆ.
ಹಿಂದೆದೂ ಕಂಡರಿಯದಂತಹ ಮಹಾಮಳೆ 2024 ರಲ್ಲಿ ಬೆಂಗಳೂರಿನಲ್ಲಿ ದಾಖಲಾಗಿದೆ. ಹಲವಾರು ಲೇಔಟ್ ಗಳು ಮಳೆಯಿಂದ ಮುಳುಗಿವೆ, ಜನರು ಪರದಾಡುವ ದೃಶ್ಯ ನೋಡಲಾಗುತ್ತಿಲ್ಲ. ಅದಾಗ್ಯೂ ಸಹ ಕೋರಮಂಗಲದಲ್ಲಿ ಆ ರೀತಿಯ ಯಾವುದೇ ಚಿತ್ರಣ ಕಾಣಸಿಗದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿ ಯೋಜನೆಗಳು, ನಿರಂತರವಾಗಿ ಸ್ಥಳೀಯ Resident Welfare Associations ಗಳ ಜೊತೆ ಸಂವಹನ, ಸಂಪರ್ಕ ಸಾಧಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ತೀವ್ರ ಗಮನಹರಿಸುವಿಕೆ, ವೈಜ್ಞಾನಿಕವಾಗಿ ಚರಂಡಿ ವ್ಯವಸ್ಥೆಗಳಿಗೆ ಕ್ರಮ, ಪ್ರತಿಯೊಂದು ವಾರ್ಡ್ ಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ವೈಯಕ್ತಿಕ ಕಾಳಜಿ ನೀಡುವಿಕೆ ಕಾರಣವೆಂದು RWA, ವಾರ್ಡ್ ಅಧ್ಯಕ್ಷರುಗಳು, ಸದಸ್ಯರುಗಳು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಹಲವಾರು ವರುಷಗಳ ಸಮಸ್ಯೆಗೆ ಪರಿಹಾರ ನೀಡಿರುವ ಸಚಿವರಿಗೆ RWA ಅವರು ಧನ್ಯವಾದಗಳನ್ನು ತಿಳಿಸಿದರು.
2017 ರಲ್ಲಿ ಕೋರಮಂಗಲದಲ್ಲಿ ಮಳೆ ನೀರು ತುಂಬಿ ಪರದಾಡುತ್ತಿದ್ದ ಜನರು



Post Comment