ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರೆ, ಲಾಭದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ಸುಗಳ ಅವಸ್ಥೆ ಒಮ್ಮೆ ನೋಡಿ ಎಂದು ಹಳೆ ಬಸ್ಸೊಂದರ ವೀಡಿಯೋ ಹಂಚಿ ಟ್ವೀಟ್ ಮಾಡಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಟ್ಟೀಟ್ ಮಾಡುವುದರಲ್ಲಿ ತಮ್ಮ ಎದೆಗಾರಿಕೆ ತೋರಿಸುವುದನ್ನು ಬಿಟ್ಟು, ಸಾರಿಗೆ ಸಂಸ್ಥೆಗಳಿಗೆ ಕಳೆದ 5 ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಯಾವ ಮಹೋನ್ನತ ಸಾಧನೆ ಮಾಡಿದ್ದೀರ ಎಂದು ತಿಳಿಸಿ ಎಂದು ಕಾಂಗ್ರೆಸ್ ಬಿಜೆಪಿಗೆ ಪ್ರಶ್ನಿಸಿದೆ.
ತಮ್ಮ ಒಂದೊಂದು ಟ್ಟೀಟ್‌ಗೂ ಅಂಕಿ ಅಂಶ ಸಮೇತ ಪ್ರತ್ಯುತ್ತರ ನೀಡಿದಾಗ ತಮ್ಮಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ ಯಾಕೆ ? ಯಾಕೆಂದರೆ ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಂದು ನಿಲ್ಲಿಸಿರುವುದು ತಮ್ಮ ಅಧಿಕಾರಾವಧಿಯಲ್ಲಿ ಎಂಬ ಕಟುವಾದ ಸತ್ಯ ನಿಮಗೆ ತಿಳಿದಿದೆ ಎಂದು ಕಾಂಗ್ರೆಸ್ ಹೇಳಿದೆ.
ನಮ್ಮ ಸರ್ಕಾರದ ‘ಶಕ್ತಿ ಯೋಜನೆ’ಯಿಂದ ಸಾರಿಗೆ ಸಂಸ್ಥೆಗಳ ಆದಾಯದಲ್ಲಿ ಗಣನೀಯ ವೃದ್ಧಿಯಾದರೂ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬಲು ಸಾಧ್ಯವಾಗಿಲ್ಲದಿರುವುದು ತಮ್ಮ ಸರ್ಕಾರದ ಕೊಡುಗೆ ಎಂದು ಬಿಜೆಪಿ ಟ್ವೀಟ್ ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.
Post Comment