ನನಸಾದ ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ಕನಸು
ಬೆಂಗಳೂರು: ವಾಯವ್ಯ ರಸ್ತೆ ಸಾರಿಗೆ ವ್ಯಾಪ್ತಿಯ ಸಾವಳಗಿ, ರಬಕವಿ-ಬನಹಟ್ಟಿ ಬಸ್ ನಿಲ್ದಾಣಗಳನ್ನು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿರಾದ ರಾಮಲಿಂಗಾರೆಡ್ಡಿ ರವರು ಮಾತನಾಡಿ, ವಾಕರಸಾ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳ ಕೊರತೆ ಇದ್ದು, 2000 ಚಾಲನಾ ಸಿಬ್ಬಂದಿಗಳ ನೇಮಕಕ್ಕೆ ಅನುಮೋದನೆಯನ್ನು ನೀಡಿದ್ದು, ಈಗಾಗಲೇ 1000 ಜನರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ನಾನು ಈ ಹಿಂದೆ ಸಾರಿಗೆ ಮಂತ್ರಿಯಾಗಿದ್ದ ಸಮಯದಲ್ಲಿ ನವನಗರ, ಜಮಖಂಡಿ, ತೇರದಾಳ, ಬಾದಾಮಿ, ಹುನಗುಂದ,ಬಾಡಗಂಡಿ, ಹಾಗು ಯಡಹಳ್ಳಿ ನೂತನ ಬಸ್ ನಿಲ್ದಾಣಗಳ ನಿರ್ಮಾಣ ಮಾಡಲಾಗಿತ್ತು. ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ.
ಕಳೆದ 5 ವರ್ಷಗಳಿಂದ ಹೊಸ ಬಸ್ಸುಗಳ ಖರೀದಿ ಇರಲಿಲ್ಲ. ಈಗ ನಮ್ಮ ಸರ್ಕಾರ ಬಂದ ಮೇಲೆ ಹೊಸ ಬಸ್ಸುಗಳನ್ನು ಖರೀದಿ ಮಾಡಿದ್ದೇವೆ.
ಅಲ್ಲದೇ, ಸಾವಳಗಿ ಗ್ರಾಮದ 31 ವರ್ಷಗಳ ಕನಸು ಈ ನೂತನ ಬಸ್ ನಿಲ್ದಾಣ ಇಂದು ಉದ್ಘಾಟನೆ ಮಾಡಿದ್ದೇವೆ. ಜೊತೆಗೆ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ರಬಕವಿ ಮತ್ತು ಬನಹಟ್ಟಿ ಬಸ್ ನಿಲ್ದಾಣಗಳನ್ನು ತೆರವುಗೊಳಿಸಿ, ನೂತನವಾಗಿ ರಬಕವಿ ಮತ್ತು ಬನಹಟ್ಟಿ ಬಸ್ ನಿಲ್ದಾಣಗಳನ್ನೂ ಉದ್ಘಾಟನೆ ಮಾಡಿದ್ದೇವೆ ಎಂದರು.

ಈ ಭಾಗದಿಂದ ಬೆಂಗಳೂರಿಗೆ ಪಲ್ಲಕ್ಕಿ ಬಸ್ಸುಗಳ ಬೇಡಿಕೆ ಇದ್ದು, ಸದ್ಯ KSRTC ಯಲ್ಲಿ ಮಾತ್ರ ಪಲ್ಲಕ್ಕಿ ಬಸ್ಸುಗಳ ಖರೀದಿ ಇದ್ದು, KSRTC ಬೆಂಗಳೂರಿನಿಂದಲೇ ಈ ಭಾಗಕ್ಕೆ ಪಲ್ಲಕ್ಕಿ ಬಸ್ಸುಗಳ ಕಾರ್ಯಾಚರಣಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ KSRTC ಕಾರ್ಮಿಕ ಸಂಘಟನೆಯವರುಗಳು ಸಲ್ಲಿಸಿದ ಮನವಿ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪುರ, ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಭರಮಗೌಡ ಕಾಗೆ, ಸಿದ್ದು ಸವದಿ ಶಾಸಕರು ತೇರದಾಳ, ಜಗದೀಶ್ ಎಸ್ ಗುಡುಗುಂಟಿ ಶಾಸಕರು, ಜಮಖಂಡಿ ಆನಂದ್ ನ್ಯಾಮಗೌಡ ಮಾನ್ಯ ಮಾಜಿ ಶಾಸಕರು, ಸಿದ್ದು ಕೋಣೋರು, ಪೀರಸಾಬ ಕೌತಾಳ, ಉಪಾಧ್ಯಕ್ಷರು, ವಾಯವ್ಯ ಸಾರಿಗೆ ಸಂಸ್ಥೆ, ವಿದ್ಯಾ ಪ್ರವೀಣ ದಬಾಡಿ, ಅಧ್ಯಕ್ಷರು, ರಬಕವಿ ಬನಹಟ್ಟಿ ನಗರಸಭೆ, ಕವಿತಾ ಎಸ್ ಪಾಟೋಳಿ, ಮಾನ್ಯ ಅಧ್ಯಕ್ಷರು, ಸಾವಳಗಿ ಗ್ರಾಮಪಂಚಾಯಿತಿ ಪ್ರಿಯಾಂಗಾ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು ವಾಯವ್ಯ ಸಾರಿಗೆ ಸಂಸ್ಥೆ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
Post Comment