×

ಕೆಎಸ್‌ಆರ್‌ಟಿಸಿ‌ಗೆ ರಾಷ್ಟ್ರೀಯ ಮಟ್ಟದ ಪರಿಸರ ಪ್ರಶಸ್ತಿ

ಪರಿಸರ ಸಂರಕ್ಷಣೆಯತ್ತ ಕೈಗೊಂಡಿರುವ ಪರಿಣಾಮಕಾರಿ ಹಾಗೂ ಪರಿಸರ ಸ್ನೇಹಿ ಉಪಕ್ರಮಗಳಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಗೆ ಪ್ರತಿಷ್ಠಿತ Grow Care India Environment Excellence Award–2025 ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಸಾರಿಗೆ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿರುವ ಪರಿಸರ ನಿರ್ವಹಣಾ ಕಾರ್ಯಗಳ ಯಶಸ್ವಿಗೆ Grow Care India Environment Management Award ನ Gold Category ಯಲ್ಲಿ ಈ ಗೌರವ ದೊರೆತಿದೆ.

ಈ ಪ್ರಶಸ್ತಿಯನ್ನು 17-01-2026 ರಂದು ನವದೆಹಲಿಯ ಏರೋಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ನಿರ್ದೇಶಕಿ ಹಾಗೂ ಜಂಟಿ ಕಾರ್ಯದರ್ಶಿ ಮೃಣಾಲಿನಿ ಶ್ರೀವಾಸ್ತವ ಹಾಗೂ ರಕ್ಷಣಾ ಸಚಿವಾಲಯದ ದೆಹಲಿ ಕ್ಯಾಂಟೋನ್‌ಮೆಂಟ್ ಬೋರ್ಡ್ ಸದಸ್ಯ ರಾಜೇಶ್ ಗೋಯಲ್ ಅವರು ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ. ವೆಂಕಟೇಶ್ ಅವರಿಗೆ ಪ್ರದಾನ ಮಾಡಿದರು.

ಈ ಸಾಧನೆಯೊಂದಿಗೆ ಕೆಎಸ್‌ಆರ್‌ಟಿಸಿ ಪರಿಸರ ಸಂರಕ್ಷಣೆಯಲ್ಲಿನ ತನ್ನ ಬದ್ಧತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed