ಮಂಗಳೂರು: ಬಹು ನಿರೀಕ್ಷಿತ “ಕುಡ್ಲ ನಮ್ದು ಊರು” ಕನ್ನಡ ಚಲನಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದು, ಸಿನಿಮಾ ಈಗಾಗಲೇ 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಕರಾವಳಿಯ ಸೊಗಡು, ಮಂಗಳೂರಿನ ಸಂಸ್ಕೃತಿ ಹಾಗೂ 90ರ ದಶಕದ ಮಕ್ಕಳ ಬಾಲ್ಯದ ನೆನಪುಗಳನ್ನು ತೆರೆ ಮೇಲೆ ಜೀವಂತಗೊಳಿಸಿರುವ ಈ ಚಿತ್ರವು ಕುಟುಂಬ ಸಮೇತರಾಗಿ ನೋಡಬಹುದಾದ ಮನರಂಜನೆಯ ಚಿತ್ರವಾಗಿಯೂ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ.
ದುರ್ಗ ಪ್ರಸಾದ್ ಆರ್.ಕೆ, ಚಿತ್ರಗೌಡ, ಅಂಕಿತಾ ಪದ್ಯ ಹಾಗೂ ನರೇಂದ್ರ ಜೈನ್ ನಿರ್ಮಾಣದ ಈ ಚಿತ್ರದಲ್ಲಿ ನಾಯಕನಾಗಿ ಅಲೋಕ್ ಎ. ಕುಂದರ್ ಅಭಿನಯಿಸಿದ್ದಾರೆ. ನಿರ್ದೇಶಕರಾಗಿ ದುರ್ಗಾ ಪ್ರಸಾದ್, ಆರ್.ಕೆ., ಆರ್ಯ.ಡಿ.ಕೆ ಕಾರ್ಯನಿರ್ವಹಿಸಿದ್ದಾರೆ.
ನಿತಿನ್ ಶಿವರಾಮ ಅವರ ಸಂಗೀತ, ನಿತಿನ್ ಬಂಗೇರ ಅವರ ಸಾಹಿತ್ಯ, ಶ್ರೀ ಸಾಸ್ತ ಅವರ ಹಿನ್ನಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಬಣ್ಣ ತುಂಬಿದೆ. ಮಯೂರ ಆರ್. ಶೆಟ್ಟಿ ಛಾಯಾಗ್ರಹಣ, ನಿಶಿತ್ ಪೂಜಾರಿ ಸಂಕಲನ, ವಿದ್ಯುತ್ ಶಿವ – ಧೀರಜ್ ಸನಿಲ್ ಕಲೆ, ರಕ್ಷಿತ್ ಎಸ್. ಜೋಗಿ ನೃತ್ಯ, ಚಂದ್ರು ಬಂಡೆ ಸಾಹಸ ಹಾಗೂ ಗೋಲ್ಡನ್ ಗೇಟ್ ಸ್ಟುಡಿಯೋ – ಕೃತಾರ್ಥ ಪ್ರೊಡಕ್ಷನ್ VFX ಕಾರ್ಯ ನಿರ್ವಹಿಸಿದ್ದಾರೆ.
ಪ್ರಚಾರ ಕಲೆಯನ್ನು ದೇವು ರೂಪಿಸಿದ್ದು, ಪತ್ರಿಕಾ ಸಂಪರ್ಕವನ್ನು ಕಾರ್ತಿಕ್ ಸುಧನ್ ನೋಡಿಕೊಂಡಿದ್ದಾರೆ.
🎬 ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿರುವ “ಕುಡ್ಲ ನಮ್ದು ಊರು” ಸಿನಿಮಾ ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವ ನಿರೀಕ್ಷೆಯಿದೆ.
🎤 ಪ್ರೇಕ್ಷಕರ ಪ್ರತಿಕ್ರಿಯೆಗಳು:
“ಈ ಸಿನಿಮಾ ನೋಡಿದಾಗ ನಮ್ಮ ಬಾಲ್ಯದ ದಿನಗಳು ನೆನಪಿಗೆ ಬಂದವು. ಆಟ–ಆಟಗಳಲ್ಲಿ ಬೆಳೆದ ಕಾಲವನ್ನು ಸುಂದರವಾಗಿ ತೋರಿಸಿದ್ದಾರೆ.” – ಶಿವಪ್ರಸಾದ್, ಮಂಗಳೂರು.
“ಕರಾವಳಿಯ ಸಂಸ್ಕೃತಿ, ಮಣ್ಣಿನ ಗಂಧವನ್ನು ಅದ್ಭುತವಾಗಿ ತೆರೆಗೆ ತಂದಿದ್ದಾರೆ. ಕುಟುಂಬ ಸಮೇತರಾಗಿ ನೋಡುವಂತ ಸಿನಿಮಾ.” – ಅಂಜಲಿ, ಉಡುಪಿ.
“ನಾವು 90s kids. ಈ ಚಿತ್ರ ನಮ್ಮ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದೆ.” – ಕಿರಣ್, ಬೆಳ್ತಂಗಡಿ.
Post Comment