ಬೆಂಗಳೂರು: ಮುಜರಾಯಿ ಇಲಾಖೆಗೆ ತನ್ನದೇ ಆದ ಕಟ್ಟಡವು ಶೀಘ್ರದಲ್ಲೇ ಸಿದ್ಧವಾಗುತ್ತಿದೆ. ಇದುವರೆಗೆ ಚಾಮರಾಜಪೇಟೆಯಿಂದ ಕಾರ್ಯನಿರ್ವಹಿಸುತ್ತಿದ್ದ ಈ ಇಲಾಖೆ ಇದೀಗ ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಸುಮಾರು 10 ಸಾವಿರ ಚದರ ಅಡಿ ಜಾಗದಲ್ಲಿ 27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 5 ಅಂತಸ್ತಿನ “ಧಾರ್ಮಿಕ ಸೌಧ” ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗುತ್ತಿದೆ.
ಮುಜರಾಯಿ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಸಚಿವ ರಾಮಲಿಂಗಾರೆಡ್ಡಿಯವರು ಈ ಇಲಾಖೆಗೆ ಹೊಸ ಆಯಾಮ ನೀಡುತ್ತಾ ಬಂದಿದ್ದಾರೆ. ಭಕ್ತರು ಹಾಗೂ ಅರ್ಚಕರ ಅನುಕೂಲಕ್ಕಾಗಿ ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿರುವ ಅವರು, ಇಲಾಖೆಯ ಕಾರ್ಯವೈಖರಿಯನ್ನು ಹೆಚ್ಚು ಜನಕೇಂದ್ರಿತಗೊಳಿಸಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುಮತಿಯನ್ನು ಈಗಾಗಲೇ ಸಂಪುಟದಿಂದ ಪಡೆದುಕೊಳ್ಳಲಾಗಿದೆ. ಬೇಗನೇ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗುವ ನಿರೀಕ್ಷೆಯಿದ್ದು, ಉದ್ಘಾಟನೆಯೂ ಸಚಿವ ರಾಮಲಿಂಗಾರೆಡ್ಡಿಯವರ ನೇತೃತ್ವದಲ್ಲಿಯೇ ನಡೆಯಲಿದೆ ಎಂಬುದು ಎಲ್ಲರ ಆಶಯವಾಗಿದೆ.
ಈ ಹೊಸ ಕಟ್ಟಡವು ಮುಜರಾಯಿ ಇಲಾಖೆಯ ಕಾರ್ಯವೈಖರಿಯನ್ನು ಮತ್ತಷ್ಟು ಸುಧಾರಿಸಲು ನೆರವಾಗಲಿದ್ದು, ಇಲಾಖೆಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಲಿದೆ.
Post Comment