ನಾಳೆಯಿಂದ ಚಿತ್ರಮಂದಿರಗಳಲ್ಲಿ ಮೂಡಿಬರಲಿರುವ ಕರಾವಳಿ ಕಥೆ
ಮಂಗಳೂರು: ಕರಾವಳಿಯ ನೆನಪುಗಳು, 90ರ ದಶಕದ ಮಕ್ಕಳ ಅನುಭವಗಳು, ಮತ್ತು ಸ್ಥಳೀಯ ಸಂಸ್ಕೃತಿಯ ಸೊಗಡನ್ನು ಮರೆಮಾಡಿಕೊಂಡಿರುವ “ಕೂಡ್ಲ ನಮ್ದು ಊರು” ಸಿನಿಮಾ ನಾಳೆ (ಸೆಪ್ಟೆಂಬರ್ 5) ಪ್ರೇಕ್ಷಕರ ಮುಂದಿಡಲಾಗುತ್ತಿದೆ.
ಈ ಚಿತ್ರವು ಕರಾವಳಿಯ ಜನಜೀವನ, ಅಲ್ಲಿನ ಸಂಪ್ರದಾಯ, ಮಣ್ಣಿನ ಸೊಗಡು ಮತ್ತು ಬಾಲ್ಯದ ಸಿಹಿ ನೆನಪುಗಳನ್ನು ತೆರೆ ಮೇಲೆ ಮೂಡಿಸುವ ಮೂಲಕ ಹೆಚ್ಚಿನ ಜನರಿಗೆ ಮಂಗಳೂರಿನ ವಿಶಿಷ್ಟತೆ ಹಾಗೂ ಸಂಸ್ಕೃತಿ ತಲುಪಿಸುವ ಉದ್ದೇಶ ಹೊಂದಿದೆ. ವಿಶೇಷವಾಗಿ 90s Kids ಪೀಳಿಗೆಗೆ ಈ ಸಿನಿಮಾ ತಮ್ಮ ಹಳೆಯ ದಿನಗಳನ್ನು ಮತ್ತೆ ನೆನಪಿಸಿಕೊಡುವಂತಿದೆ.
ದುರ್ಗ ಪ್ರಸಾದ್ ಆರ್.ಕೆ, ಚಿತ್ರಗೌಡ, ಅಂಕಿತಾ ಪದ್ಯ ಮತ್ತು ನರೇಂದ್ರ ಜೈನ್ ನಿರ್ಮಿಸಿರುವ ಈ ಚಿತ್ರದಲ್ಲಿ ಅಲೋಕ್ ಎ. ಕುಂದರ್ ನಾಯಕನಾಗಿ ನಟಿಸಿದ್ದಾರೆ. ದುರ್ಗಾ ಪ್ರಸಾದ್, ಆರ್.ಕೆ., ಆರ್ಯ.ಡಿ.ಕೆ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರಕ್ಕೆ ನಿತಿನ್ ಶಿವರಾಮ ಸಂಗೀತ ನೀಡಿದ್ದು, ನಿತಿನ್ ಬಂಗೇರ ಸಾಹಿತ್ಯ ಬರೆದಿದ್ದಾರೆ.
ಮಯೂರ ಆರ್. ಶೆಟ್ಟಿ ಛಾಯಾಗ್ರಹಣ, ನಿಶಿತ್ ಪೂಜಾರಿ ಸಂಕಲನ, ವಿದ್ಯುತ್ ಶಿವ – ಧೀರಜ್ ಸನಿಲ್ ಕಲೆ, ರಕ್ಷಿತ್ ಎಸ್. ಜೋಗಿ ನೃತ್ಯ ಹಾಗೂ ಚಂದ್ರು ಬಂಡೆ ಸಾಹಸ ಸಂಯೋಜನೆ ಮಾಡಿದ್ದಾರೆ. ಸಚಿನ್ ಅರಬಳ್ಳಿ, ವಿಶಾಖ್ ಕಗ್ಗಾಪುರ, ಚೇತನ ಗಣೇಶಪುರ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.
ಪ್ರಚಾರ ಕಲೆಯನ್ನು ದೇವು ರೂಪಿಸಿದ್ದು, ಪತ್ರಿಕಾ ಸಂಪರ್ಕವನ್ನು ಕಾರ್ತಿಕ್ ಸುಧನ್ ನಿರ್ವಹಿಸುತ್ತಿದ್ದಾರೆ.
🎬 ಕರಾವಳಿಯ ಹುಟ್ಟು, ಜೀವನ ಶೈಲಿ, ಸಂಸ್ಕೃತಿಯ ವಿಶಿಷ್ಟತೆಯನ್ನು ಮನದಟ್ಟುಗೊಳಿಸುವ “ಕೂಡ್ಲ ನಮ್ದು ಊರು” ಸಿನಿಮಾ ನಾಳೆಯಿಂದ ಎಲ್ಲಾ ಪ್ರಮುಖ ಚಿತ್ರಮಂದಿರಗಳಲ್ಲಿ ಲಭ್ಯ.
Post Comment