ಕೆ.ಜಿ.ಎಫ್: ಆಗಸ್ಟ್ 28, 2025: ಕೆ.ಜಿ.ಎಫ್ ನಲ್ಲಿ ರೂ.5 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಪ್ರಾದೇಶಿಕ ಸಾರಿಗೆ ಕಛೇರಿ ಹಾಗೂ ರೂ.5 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಿರುವ ಸ್ವಯಂ ಚಾಲಿತ ಚಾಲನಾ ಪಥವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿಯವರು ಉದ್ಘಾಟಿಸಿದರು.
ರಾಜ್ಯದಲ್ಲಿ ಸಾರಿಗೆ ಇಲಾಖೆಯ ಮೂಲಸೌಕರ್ಯ ವಿಸ್ತರಣೆಗೆ ಮಹತ್ವದ ಹೆಜ್ಜೆಯಾಗಿ, ಒಟ್ಟು 7 ಸ್ವಂತ ಕಛೇರಿಗಳನ್ನು ರೂ.45.74 ಕೋಟಿಗಳ ವೆಚ್ಚದಲ್ಲಿ ಈಗಾಗಲೇ ನಿರ್ಮಿಸಲಾಗಿದ್ದು, ಮತ್ತಷ್ಟು 8 ಕಛೇರಿಗಳ ಕಾಮಗಾರಿಗಳು ರೂ.70 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿವೆ. ಮಧುಗಿರಿ ಮತ್ತು ಹೊನ್ನಾವರ ಕಛೇರಿ ಕಟ್ಟಡಗಳನ್ನು ರೂ.10.05 ಕೋಟಿಗಳ ವೆಚ್ಚದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲು ಸಿದ್ಧತೆ ನಡೆದಿದೆ.

ಇದೇ ಸಂದರ್ಭದಲ್ಲಿ, ರಾಜ್ಯದಾದ್ಯಂತ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣಕ್ಕೂ ವೇಗ ಬಂದಿದೆ. ಇದುವರೆಗೆ 9 ಡ್ರೈವಿಂಗ್ ಟ್ರ್ಯಾಕ್‌ಗಳನ್ನು ರೂ.44.21 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 28 ಡ್ರೈವಿಂಗ್ ಟ್ರ್ಯಾಕ್‌ಗಳ ಕಾಮಗಾರಿಗಳು ಒಟ್ಟು ರೂ.203 ಕೋಟಿಗಳ ವೆಚ್ಚದಲ್ಲಿ ನಡೆಯುತ್ತಿವೆ. ಹೊನ್ನಾವರ, ಚಾಮರಾಜನಗರ ಮತ್ತು ಚಿತ್ರದುರ್ಗಗಳಲ್ಲಿ ರೂ.21 ಕೋಟಿಗಳ ವೆಚ್ಚದಲ್ಲಿ ಹೊಸ ಡ್ರೈವಿಂಗ್ ಟ್ರ್ಯಾಕ್‌ಗಳ ನಿರ್ಮಾಣಕ್ಕೂ ಯೋಜನೆ ಇದೆ.
ರಾಜ್ಯದಲ್ಲಿ ಜಿಲ್ಲೆಗೆ ಒಂದರಂತೆ 32 ಸ್ಥಳಗಳಲ್ಲಿ ಪಿ.ಪಿ.ಪಿ. ಅಡಿ ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೂ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ. ಚಾಲಕರ ಗುಣಮಟ್ಟವನ್ನು ಹೆಚ್ಚಿಸಲು ಭಾರಿ ವಾಹನ ಚಾಲಕರ 4 ತರಬೇತಿ ಕೇಂದ್ರಗಳನ್ನು ರೂ.60.76 ಕೋಟಿಗಳ ವೆಚ್ಚದಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ. 1 ತರಬೇತಿ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದ್ದು, ವಿಜಯಪುರ, ಬಳ್ಳಾರಿ ಮತ್ತು ನಾಗಮಂಗಲಗಳಲ್ಲಿ ಹೊಸ ತರಬೇತಿ ಕೇಂದ್ರಗಳ ನಿರ್ಮಾಣಕ್ಕೂ ಉದ್ದೇಶಿಸಲಾಗಿದೆ.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ಕೆ.ಎಚ್. ಮುನಿಯಪ್ಪ, ಶಾಸಕಿ ರೂಪಾ ಶಶಿಧರ್, ಶಾಸಕ ನಾರಾಯಣಸ್ವಾಮಿ, ಮಾಜಿ ಶಾಸಕರಾದ ನಾರಾಯಣಸ್ವಾಮಿ, ಸಾರಿಗೆ ಆಯುಕ್ತರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
Post Comment