“ಕುಡ್ಲ” ಸಿನಿಮಾ ಸೆಪ್ಟೆಂಬರ್ 5ರಂದು ಬಿಡುಗಡೆ
ಮಂಗಳೂರು: ಕರಾವಳಿಯ ಹಿನ್ನೆಲೆಯೊಂದಿಗೆ ಮೂಡಿಬಂದಿರುವ “ಕುಡ್ಲ ನಮ್ದು ಊರು” ಕನ್ನಡ ಚಲನಚಿತ್ರವು ಸೆಪ್ಟೆಂಬರ್ 5ರಂದು ಪ್ರೇಕ್ಷಕರ ಮುಂದಿಡಲಾಗುತ್ತಿದೆ.
ಈ ಚಿತ್ರಕ್ಕೆ ನಿರ್ಮಾಪಕರಾಗಿ ದುರ್ಗ ಪ್ರಸಾದ್ ಆರ್.ಕೆ, ಚಿತ್ರಗೌಡ, ಅಂಕಿತಾ ಪದ್ಯ ಹಾಗೂ ನರೇಂದ್ರ ಜೈನ್ ಕಾರ್ಯನಿರ್ವಹಿಸಿದ್ದಾರೆ. ನಾಯಕ ನಟನಾಗಿ ಅಲೋಕ್ ಎ. ಕುಂದರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಚಿತ್ರವನ್ನು ದುರ್ಗಾ ಪ್ರಸಾದ್, ಆರ್.ಕೆ., ಹಾಗೂ ಆರ್ಯ.ಡಿ.ಕೆ ನಿರ್ದೇಶಿಸಿದ್ದು, ನಿತಿನ್ ಶಿವರಾಮ ಅವರ ಸಂಯೋಜನೆಯಲ್ಲಿ ಮನಮೋಹಕ ಸಂಗೀತ ಸಿದ್ಧವಾಗಿದೆ. ಸಾಹಿತ್ಯವನ್ನು ನಿತಿನ್ ಬಂಗೇರ ಬರೆದಿದ್ದು, ಹಿನ್ನಲೆ ಸಂಗೀತವನ್ನು ಶ್ರೀ ಸಾಸ್ತ ನೀಡಿದ್ದಾರೆ.
ಚಿತ್ರದ ಕಲೆ ವಿಭಾಗವನ್ನು ವಿದ್ಯುತ್ ಶಿವ ಮತ್ತು ಧೀರಜ್ ಸನಿಲ್ ನಿರ್ವಹಿಸಿದ್ದು, ಛಾಯಾಗ್ರಹಣವನ್ನು ಮಯೂರ ಆರ್. ಶೆಟ್ಟಿ ಮಾಡಿದ್ದಾರೆ. ನಿಶಿತ್ ಪೂಜಾರಿ ಸಂಕಲನ, ಗೋಲ್ಡನ್ ಗೇಟ್ ಸ್ಟುಡಿಯೋ, ಕೃತಾರ್ಥ ಪ್ರೊಡಕ್ಷನ್ VFX ಕಾರ್ಯ, ರಕ್ಷಿತ್ ಎಸ್. ಜೋಗಿ ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ಸಂಯೋಜನೆ ಮಾಡಿದ್ದಾರೆ.
ಗಾಯಕರಾಗಿ ಸಚಿನ್ ಅರಬಳ್ಳಿ, ವಿಶಾಖ್ ಕಗ್ಗಾಪುರ, ಚೇತನ ಗಣೇಶಪುರ ತಮ್ಮ ಕಂಠಸಿರಿಯಿಂದ ಹಾಡುಗಳನ್ನು ಜೀವಂತಗೊಳಿಸಿದ್ದಾರೆ. ನಿರ್ದೇಶನ ತಂಡದಲ್ಲಿ ಯತೀಶ್ ಕದ್ರಾ, ಗಣೇಶ್ ಅಸಾಧ್ಯ ಪ್ರಮುಖ ಪಾತ್ರವಹಿಸಿದ್ದು, ಪ್ರಚಾರ ಕಲೆಯನ್ನು ದೇವು ರೂಪಿಸಿದ್ದಾರೆ. ಪತ್ರಿಕಾ ಸಂಪರ್ಕವನ್ನು ಕಾರ್ತಿಕ್ ಸುಧನ್ ನೋಡಿಕೊಳ್ಳುತ್ತಿದ್ದಾರೆ.
ಈ ಚಿತ್ರವು ಸ್ಥಳೀಯ ಕಲಾವಿದರ ಶ್ರಮ, ಉತ್ಸಾಹ ಹಾಗೂ ಹೊಸತಾದ ಸೃಜನಶೀಲತೆಯನ್ನು ಒಳಗೊಂಡಿದ್ದು, ಮಂಗಳೂರಿನ ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಬೆರೆಸಿಕೊಂಡಿದೆ.
🎬 ಪ್ರೇಕ್ಷಕರು ಕಾದಿರುವ “ಕುಡ್ಲ ನಮ್ದು ಊರು” ಸೆಪ್ಟೆಂಬರ್ 5ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.



Post Comment