ಕೋರಮಂಗಲ-ಜಯನಗರದಲ್ಲಿ 26.08.2025 ರಂದು ಉಚಿತ ಮಣ್ಣಿನ ಗಣಪತಿ ವಿತರಣೆ
ಬೆಂಗಳೂರು: ಗಣೇಶ ಚತುರ್ತಿಯ ಪ್ರಯುಕ್ತ ಪರಿಸರ ಸ್ನೇಹಿ ಉಪಕ್ರಮವಾಗಿ ಮಣ್ಣಿನ ಗಣಪತಿ ವಿತರಣೆಗೆ ನಗರದಲ್ಲಿ ಸಜ್ಜಾಗಿದೆ. ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರ ನೇತೃತ್ವದಲ್ಲಿ ಕಳೆದ 10-15 ವರ್ಷಗಳಿಂದ ನಡೆಯುತ್ತಿರುವ ಈ ಉಪಕ್ರಮವು ಈ ವರ್ಷವೂ ಮುಂದುವರಿಯುತ್ತಿದೆ.

POP ಗಣಪತಿ ಮೂರ್ತಿಗಳ ವಿಸರ್ಜನೆಯಿಂದ ಉಂಟಾಗುವ ಜಲಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ. ಈ ಮೂಲಕ ಪರಿಸರ ಸಮತೋಲನ ಕಾಪಾಡುವ ಉದ್ದೇಶವಿದೆ.
ವಿತರಣೆ ವೇಳಾಪಟ್ಟಿ:
ಬೆಳಿಗ್ಗೆ 8.30: ಶಾಸಕರ ಕಛೇರಿ, ಕೋರಮಂಗಲ
ಬೆಳಿಗ್ಗೆ 9.00: ಎಲ್‌ಐಸಿ ಕಾಲೋನಿ, ಜಯನಗರ (ನಾಗರಾಜ್ ನೇತೃತ್ವ)
ಬೆಳಿಗ್ಗೆ 9.30: ಸಾರಕ್ಕಿ, ಇಂದಿರಾ ಗಾಂಧಿ ಪ್ರತಿಮೆ ಬಳಿ (ಅರುಣ್ ಕುಮಾರ್ ನೇತೃತ್ವ)
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.
Post Comment