×

ಗುಂಪು ವಿಮಾ ಯೋಜನೆ; ಮೃತ ನೌಕರರ ಕುಟುಂಬಕ್ಕೆ ರೂ.1.40 ಕೋಟಿಗಳ ಪರಿಹಾರ ಮೊತ್ತ ವಿತರಣೆ

ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ, ಕಲಬುರಗಿಯಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರು ಹಾಗೂ ಅಧ್ಯಕ್ಷರು ಕ.ಕ.ರಾ.ಸಾ.ನಿಗಮ ರಾಮಲಿಂಗರೆಡ್ಡಿ ರವರು ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರವರಾದ ಎಂ.ರಾಚಪ್ಪರವರು ನಿಗಮದ ಆಂತರಿಕ ಗುಂಪು ವಿಮಾ ಯೋಜನೆ ಅಡಿ ಸದಸ್ಯರಾಗಿ ಸೇವಾ ಅವಧಿಯಲ್ಲಿ ನಿಧನಗೊಂಡಿರುವ ಬೀದರ ವಿಭಾಗ-05, ವಿಜಯಪೂರ ವಿಭಾಗ-04, ಕಲಬುರಗಿ ವಿಭಾಗ-02 ಹಾಗೂ ರಾಯಚೂ ವಿಭಾಗ-03 ಒಟ್ಟು 14 ಮೃತ ನೌಕರರ ನಾಮನಿರ್ದೇಶಿತರಿಗೆ ತಲಾ ರೂ.10.00ಲಕ್ಷಗಳಂತೆ ಒಟ್ಟು 14 ಜನರಿಗೆ ರೂ.1.40 ಕೋಟಿಗಳ ಪರಿಹಾರ ಮೊತ್ತದ ಧನಾದೇಶಗಳನ್ನು ವಿತರಿಸಿದರು.

%voice of karnataka % top kannada news

ಇಂದು ಧನಾದೇಶಗಳನ್ನು ವಿತರಿಸಿ ಮಾತಾನಾಡಿದ ಸಾರಿಗೆ ಹಾಗೂ ಮುಜಾರಾಯಿ ಸಚಿವರು ಕ.ಕ.ರ.ಸಾ.ನಿಗಮವು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆಂತರಿಕ ಗುಂಪು ವಿಮ ಯೋಜನೆ ಅಡಿ ಸದಸ್ಯರಾಗಿ ಸೇವಾ ಅವಧಿಯಲ್ಲಿ ನಿಧನಗೊಂಡ ಸಿಬ್ಬಂದಿಯವರ ನಾಮನಿರ್ದೇಶಿತರಿಗೆ ರೂ.10.00 ಲಕ್ಷ ಪರಿಹಾರ ವಿತರಿಸುವ ಯೋಜನೆಯನ್ನು ರೂಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಹಾಗೂ ಪರಿಹಾರ ಮೊತ್ತವನ್ನು ಮಕ್ಕಳ ಶಿಕ್ಷಣ ಹಾಗೂ ಉತ್ತಮ ಭವಿಷ್ಯಕ್ಕಾಗಿ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.

%voice of karnataka % top kannada news

ಈ ಸಂದರ್ಭದಲ್ಲಿ ಮಾತಾನಾಡಿದ ಕ.ಕ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಿಗಮದ ಆಂತರಿಕ ಗುಂಪು ವಿಮಾ ಯೋಜನೆಯಡಿ ಪ್ರತಿ ಸದಸ್ಯ ನೌಕರರಿಂದ ರೂ.200/- ಮತ್ತು ಆಡಳಿತ ವರ್ಗದಿಂದ ಪ್ರತಿ ನೌಕರರ ಪರವಾಗಿ ರೂ.210/- ಸೇರಿಸಿ, ಸೇವಾ ಅವಧಿಯಲ್ಲಿ ನಿಧನಗೊಂಡ ನೌಕರರ ನಾಮನಿರ್ದೇಶಿತರಿಗೆ ಪರಿಹಾರ ಮೊತ್ತ ರೂ.10.00 ಲಕ್ಷದೊಂದಿಗೆ ಇತರೇ ಅಂತಿಮ ಅರ್ಹ ಅಭ್ಯರ್ಥನ ಸೌಲಭ್ಯಗಳನ್ನು ನಾಮನಿರ್ದೇಶಿತರಿಗೆ ವಿತರಿಸಲಾಗುವುದೆಂದು ತಿಳಿಸಿದರು.

%voice of karnataka % top kannada news

ಚೆಕ್‌ಗಳನ್ನು ಸ್ವೀಕರಿಸಿದ ಫಲಾನುಭವಿಗಳು ಮಾತಾನಾಡಿ, ಆಂತರಿಕ ಗುಂಪು ವಿಮಾ ಯೋಜನೆಯ ರೂ.10.00 ಲಕ್ಷಗಳನ್ನು ವಿತರಿಸಿರುವುದಕ್ಕೆ ಆರ್ಥಿಕವಾಗಿ ನಮ್ಮ ಕುಟುಂಬಗಳಿಗೆ ಬಹಳ ಅನುಕೂಲವಾಗಿದೆ ಇದಕ್ಕೆ ಕಾರಣಕರ್ತರಾದ ಸಾರಿಗೆ ಸಚಿವರಿಗೆ ಹಾಗೂ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿದರು.

ಈ ಸಂಧರ್ಭದಲ್ಲಿ ಕ.ಕ.ರ.ಸಾ.ನಿಗಮದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed