ಬೆಂಗಳೂರು, ಜುಲೈ 17:
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಮತ್ತು ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ಇವರು ಜಂಟಿಯಾಗಿ ನಡೆಸುತ್ತಿರುವ ಆಗಮ ಘಟಿಕೋತ್ಸವ 2025 ಈ ಬಾರಿಯ ವಿಶಿಷ್ಟ ಆಕರ್ಷಣೆಯಾಗಿ ಬೆಳಗಲಿದೆ.
ಐದು ವರ್ಷದ ಶೈಕ್ಷಣಿಕ ಅಭ್ಯಾಸದ ಬಳಿಕ, ಶೈವಾಗಮ, ವೈಖಾನಸಾಗಮ, ಪಂಚರಾತ್ರಾಗಮ, ತಂತ್ರಸಾರಾಗಮ, ವಾತುಲಾಗಮ, ವೀರಶೈವ ಆಗಮ ಹಾಗೂ ಜೈನಾಗಮ ಎಂಬ ಏಳು ವಿಭಾಗಗಳಲ್ಲಿ ಮೂರು ವರ್ಷಗಳ ಆಗಮ ಪ್ರವರ ಹಾಗೂ ನಂತರದ ಎರಡು ವರ್ಷಗಳ ಆಗಮ ಪ್ರವೀಣ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಸುಮಾರು 2103 ಅರ್ಚಕರಿಗೆ ಈ ಬಾರಿ ಪ್ರಥಮ ಬಾರಿಗೆ ಘಟಿಕೋತ್ಸವ CONVOCATION CERTIFICATE ನೀಡಲಾಗುತ್ತಿದೆ.
2006ರಿಂದ ಇಲ್ಲಿಯವರೆಗೆ ವಿದ್ಯಾಭ್ಯಾಸ ಮುಗಿಸಿ, ಪರೀಕ್ಷೆ ಬರೆದು ತೇರ್ಗಡೆಯಾದ ಅರ್ಚಕರಿಗೆ ಇದುವರೆಗೆ ಯಾವುದೇ ರೀತಿಯ ಪ್ರಮಾಣಪತ್ರ ನೀಡಲಾಗಿರಲಿಲ್ಲ. ಈ ದೀರ್ಘ ನಿರೀಕ್ಷೆಗೆ ತೆರೆ ಎಳೆದಿದ್ದು, ಕೆಲ ತಿಂಗಳ ಹಿಂದೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮೈಸೂರಿನಲ್ಲಿ ಸುಮಾರು 800 ಅರ್ಚಕರಿಗೆ ಸಾಂಕೇತಿಕವಾಗಿ ಪ್ರಮಾಣಪತ್ರ ವಿತರಣೆ ನೆರವೇರಿಸಿದ್ದರು.
ಈಗ, ಇದೇ ಸಂದರ್ಭದಲ್ಲಿ ಬೆಂಗಳೂರಲ್ಲಿ ಎಲ್ಲಾ 2103 ಅರ್ಚಕರಿಗೆ ಅಧಿಕೃತವಾಗಿ ಪ್ರಮಾಣಪತ್ರ ನೀಡಲಾಗುತ್ತಿದೆ.
ಕಾರ್ಯಕ್ರಮದ ವಿವರಗಳು ಈ ಕೆಳಕಂಡಂತಿವೆ:
📅 ದಿನಾಂಕ: 19/07/2025
🕒 ಸಮಯ: ಮಧ್ಯಾಹ್ನ 3 ಗಂಟೆ
📍 ಸ್ಥಳ: ಶೃಂಗೇರಿ ಶಾರದಾ ಕಲ್ಯಾಣ ಮಂಟಪ, ಕಾರಂಜಿ ಆಂಜನೇಯ ದೇವಸ್ಥಾನದ ಆವರಣ, ಬಸವನಗುಡಿ, ಬೆಂಗಳೂರು
ದಿವ್ಯ ಸಾನಿಧ್ಯದಲ್ಲಿ:
- ಶ್ರೀ ಸಿದ್ಧಲಿಂಗಮಹಾಸ್ವಾಮೀಜಿ, ಪೀಠಾಧ್ಯಕ್ಷರು, ಸಿದ್ದಗಂಗಾ ಮಠ, ತುಮಕೂರು
- ಪ್ರಸನ್ನತೀರ್ಥ ಶ್ರೀಪಾದರು, ಪೀಠಾಧ್ಯಕ್ಷರು, ಪೇಜಾವರ ಮಠ, ಉಡುಪಿ
- ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು, ಪೀಠಾಧಿಪತಿಗಳು, ವಿಶ್ವ ಒಕ್ಕಲಿಗರ ಮಠ
ಮುಖ್ಯ ಅತಿಥಿಗಳು:
- ಸಿದ್ದರಾಮಯ್ಯ, ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ
- ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ, ಕರ್ನಾಟಕ ಸರ್ಕಾರ
- ರಾಮಲಿಂಗಾ ರೆಡ್ಡಿ, ಮುಜರಾಯಿ ಮತ್ತು ಸಾರಿಗೆ ಸಚಿವ, ಕರ್ನಾಟಕ ಸರ್ಕಾರ
- ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವ
- ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ
ಅಧ್ಯಕ್ಷತೆ:
- ಉದಯ್ ಗರುಡಾಚಾರ್, ಶಾಸಕರು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ
ವಿಶೇಷ ಆಹ್ವಾನಿತರು:
ಬೆಂಗಳೂರು ನಗರದಲ್ಲಿನ ಎಲ್ಲಾ ಸಂಸದರು, ಸಚಿವರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Post Comment